Breaking
21 Mar 2026, Sat

ಉಳ್ಳಾಲ: ಡೆತ್‌ ನೋಟ್‌ ಬರೆದಿಟ್ಟು ತಾನು ಕಲಿತ ಶಾಲೆಯಲ್ಲೇ ನೇಣಿಗೆ ಶರಣಾದ ಯುವಕ

ಉಳ್ಳಾಲ: ಅವಿವಾಹಿತ ಯುವಕನೋರ್ವ ತಾನು ಕಲಿತ ಶಾಲೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುರ್ನಾಡು ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೇ 19ರಂದು ನಡೆದಿದೆ.

ಮೃತರು ಕುರ್ನಾಡು ಹೂವಿನಕೊಪ್ಪಲ ನಿವಾಸಿ ಸುಧೀರ್ (32) ಎಂದು ತಿಳಿದುಬಂದಿದೆ.

ಪೇಂಟರ್ ಆಗಿದ್ದ ಸುಧೀರ್, ನಸುಕಿನ ಜಾವ ಬೈಕ್‌ನಲ್ಲಿ ಹಾಲು ತರಲು ಮನೆಯಿಂದ ತೆರಳಿದ್ದರು. ತಡವಾದರೂ ಮಗ ಬಾರದ ಕಾರಣ ಅವರ ತಾಯಿ ಸುಧೀರ್ ಅವರನ್ನು ಹುಡುಕಿಕೊಂಡು ಹೋದಾಗ ಮನೆ ಸಮೀಪದ ಶಾಲೆಯ ಹೊರಗಡೆ ಬೈಕ್ ಕೀ ಸಮೇತ ಪತ್ತೆಯಾಗಿತ್ತು.

ಶಾಲೆಯೊಳಗೆ ಗಮನಿಸುವಾಗ ಸುಧೀರ್ ಅವರು ಶಾಲೆಯ ಮಹಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಆತ್ಮಹತ್ಯೆಗೂ ಮುನ್ನ ಡೆತ್‌ ನೋಟ್ ನಲ್ಲಿ “ತನ್ನ ಕಿಡ್ನಿಯನ್ನು ಸಹೋದರಿಯ ಪತಿಗೆ ದಾನ ಮಾಡುವಂತೆ ಹಾಗೂ ಮೇ 29ರಂದು ನಿಗದಿಯಾಗಿರುವ ಸಹೋದರನ ವಿವಾಹವನ್ನು ನಿಲ್ಲಿಸದಂತೆ ಬರೆದಿದ್ದಾರೆ.

ಈ ಕುರಿತು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *