Breaking
21 Mar 2026, Sat

ದಿಡುಪೆಯ ಕಾರು ಅಪಘಾತದಲ್ಲಿ ಬೆಂಗಳೂರಿನ ಪ್ರಯಾಣಿಕರು ಪಾರು

ಬೆಳ್ತಂಗಡಿ: ಕಾರೊಂದು ರಸ್ತೆ ಬದಿಯ ತೋಟದ ಬೇಲಿಗೆ ಡಿಕ್ಕಿ ಹೊಡೆದ ಘಟನೆ ಬೆಳ್ತಂಗಡಿ ತಾಲೂಕಿನ ದಿಡುಪೆ-ಪೈಚಾರು ರಾ.ಹೆ ಮುಂಡಾಜೆ- ಕಲ್ಮಂಜ -ಧರ್ಮಸ್ಥಳ ರಸ್ತೆಯ ಒಂಜರೆಬೈಲು ಎಂಬಲ್ಲಿ ನಡೆದಿದೆ.

ಇಂದು ಮಂಜಾನೆಯ ವೇಳೆ ಈ ಅಪಘಾತ ಸಂಭವಿಸಿದ್ದು ಕಾರಿನಲಿದ್ದ ಬೆಂಗಳೂರು ಮೂಲದ ಇಬ್ಬರು ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಚಾಲಕನ ನಿದ್ರೆಯ ಮಂಪರು ಘಟನೆಗೆ ಕಾರಣ ಅಂತ ಹೇಳಲಾಗುತ್ತಿದೆ.

ಕಾರು ಬೇಲಿಯನ್ನು ದಾಟಿ ಮುಂದುವರಿಯುತ್ತಿದ್ದರೆ ಆಳವಾದ ಕಣಿವೆಗೆ ಬೀಳುವ ಸಾಧ್ಯತೆ ಇತ್ತು. ಹಾಗೂ ಸಮೀಪದಲ್ಲಿ ವಿದ್ಯುತ್ ಕಂಬವು ಇದೆ.

ಕಾರು ಬೇಲಿಗೆ ಸಿಲುಕಿಕೊಂಡ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *