Breaking
6 Aug 2026, Thu

ಉಡುಪಿ: ಬುರ್ಖಾ ಧರಿಸಿ ತೊಟ್ಟಿಲಿನಲ್ಲಿದ್ದ ಕಂದನ ಕಳ್ಳತನಕ್ಕೆ ಯತ್ನ: ತಡೆಯಲು ಬಂದ ತಾಯಿಗೆ ಚೂರಿ ಇರಿತ!

ಉಡುಪಿ: ಇಬ್ಬರು ಬುರ್ಖಾಧಾರಿ ಮಹಿಳೆಯರು ಪುಟ್ಟ ಕಂದನ ಕಳ್ಳತನಕ್ಕೆ ಯತ್ನಿಸಿ , ಮಗುವಿನ ತಾಯಿಗೆ ಚೂರಿ ಇರಿದು ಪರಾರಿಯಾದ ಘಟನೆ ಜಿಲ್ಲೆಯ ಬೆಳಪು ಗ್ರಾಮಪಂಚಾಯತ್‌ ವ್ಯಾಪ್ತಿಯ ಜನತಾ ಕಾಲನಿಯಲ್ಲಿ ಮೇ 16ರಂದು ನಡೆದಿದೆ.

ಬೆಳಪು ಜನತಾ ಕಾಲನಿಯ ಮೊಹಮ್ಮದ್‌ ಆಲಿ ಎಂಬವರ ಮನೆಗೆ ಇಬ್ಬರು ಮಹಿಳೆಯರು ಬುರ್ಖಾ ಧರಿಸಿ ಬಂದು ʼನನಗೆ ಶೌಚಾಲಯಕ್ಕೆ ಹೋಗಬೇಕುʼ ಎಂದು ಓರ್ವ ಮಹಿಳೆ ಮನೆಯೊಳಗೆ ಪ್ರವೇಶಿಸಿದ್ದಾಳೆ.

ಬಳಿಕ ಆಕೆ ಒಳಗೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಮಗುವಿನ ತಾಯಿ ಗಾಬರಿಗೊಂಡು ಬೊಬ್ಬೆ ಹಾಕಿ, ತಡೆಯಲು ಬಂದಾಗ, ಬುರ್ಖಾಧಾರಿ ಮಹಿಳೆ ಮಗುವನ್ನು ನೆಲದಲ್ಲಿ ಬಿಟ್ಟು , ಮಗುವಿನ ತಾಯಿಗೆ ಚೂರಿ ಇರಿದು ಪರಾರಿಯಾಗಿದ್ಧಾರೆ.

ಈ ಮಹಿಳೆಯರು ಬೆಳಪು ಆಸುಪಾಸಿನಲ್ಲಿ ಇರುವ ಸಂಶಯವಿದ್ದು, ಯಾರಿಗಾದರೂ ಮಹಿಳೆಯರು ಕಂಡುಬಂದಲ್ಲಿ ತಕ್ಷಣ ಶಿರ್ವ ಠಾಣೆಗೆ 9480805450ಗೆ ತಿಳಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *