Breaking
26 Mar 2026, Thu

ರಾಯಿ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ

ಬಿ.ಸಿ.ರೋಡ್ : ಕೊಯಿಲ, ಅರಳ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕೇರಳದ ಶಿವಗಿರಿ ಮಠದ ಶೈಲಿಯಲ್ಲಿಯೇ ಬಂಟ್ವಾಳ-ಮೂಡುಬಿದಿರೆ ರಸ್ತೆಯ ರಾಯಿ ಸಮೀಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜ್ಞಾನ ಮಂದಿರ, ಗುರುಗಳ ಪಂಚಲೋಹದ ವಿಗ್ರಹ ಪ್ರತಿಷ್ಠಾಪನೆಯ ಜತೆಗೆ ಸಮುದಾಯ ಭವನದ ಲೋಕಾರ್ಪಣೆಯ ಸಮಾರಂಭ ಮೇ 11ರಂದು ನಡೆಯಲಿರುವುದರಿಂದ ಇದರ ಗುರುಗಳ ಮೂರ್ತಿ ಮೆರವಣಿಗೆ ಮತ್ತು ಹಸಿರುಹೊರಕಾಣಿಕೆ ಮೆರವಣಿಗೆಗೆ ಶುಕ್ರವಾರ ಸಂಜೆ ಬಿ.ಸಿ.ರೋಡು ಬೈಪಾಸ್‌ನಲ್ಲಿರುವ ನಾರಾಯಣಗುರು ಮಂದಿರದಲ್ಲಿ ಚಾಲನೆ ನೀಡಲಾಯಿತು.


ಪ್ರತಿಷ್ಠಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಭುವನೇಶ್ ಪಚ್ಚಿನಡ್ಕ, ಅಧ್ಯಕ್ಷ ಜಯಪ್ರಕಾಶ್ ಕೆ.ಎಸ್., ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಶ್ರೀಧರ ಪೂಜಾರಿ, ಅಧ್ಯಕ್ಷ ಶೇಖರ ಅಂಚನ್ ಪಿಲ್ಕಾಜೆಗುತ್ತು, ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಪ್ರಕಾಶ್ ಅಂಚನ್ ತೆಂಗಿನಕಾಯಿ ಹೊಡೆಯುವ ಮೂಲಕ ಹೊರೆಕಾಣಿಕೆಗೆ ಚಾಲನೆ ನೀಡಿದರು.


ಇದೇ ಸಂದರ್ಭ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್ ವಗ್ಗ, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರತಿಷ್ಠಾ ಮಹೋತ್ಸವ ಸಮಿತಿ ಪ್ರಧಾನ ಕಾಂiiದರ್ಶಿ ದೇವಪ್ಪ ಕರ್ಕೇರ ನೆಕ್ಕರೆಗುಳಿ, ಕೋಶಾಧಿಕಾರಿ ಧರ್ಮರಾಜ್ ದಡ್ಡು, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಂಗೇರ ಶಾಂತಿಪಲ್ಕೆ, ಕೋಶಾಧಿಕಾರಿ ರಮೇಶ್ ಸಾಲ್ಯಾನ್ ಹೊಸಮನೆ, ಪ್ರತಿಷ್ಠಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಕಿರಣ್ ಕುಮಾರ್ ಮಂಜಿ, ರಾಜೇಶ್ ಸುವರ್ಣ ರಾಜಲಕ್ಷ್ಮೀ, ಎಂ.ಪಿ. ದಿನೇಶ್ ಮೈಂದಬೆಟ್ಟು, ಶ್ರೀನಿವಾಸ ಪೂಜಾರಿ, ಸಂತೋಷ್ ಕುಮಾರ್ ರಾಯಿಬೆಟ್ಟು, ಜಗದೀಶ ಕೊಯಿಲ, ಶಿವರಾಮ ಅರಳ, ಜನಾರ್ಧನ ಶಾಂತಿ ಕುಟ್ಟಿಕಳ, ಜತೆಕಾರ್ಯದರ್ಶಿ ಶಮಿತ್ ರಾಯಿ, ಸಂತೋಷ್ ಅಂಚನ್ ಕೊಯಿಲ, ವೆಂಕಟೇಶ ಅರಳ, ರಾಯಿ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ ಅರಳ, ಜತೆಕಾರ್ಯದರ್ಶಿ ಅಜಿತ್ ಹೋರಂಗಳ, ಸಂಘಟನಾಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ, ಯೋಗಿಶ ಕೊಯಿಲ, ಅಶ್ವತ್ಥ ಅರಳ, ಹಾಗೂ ಮಾಜಿ ಅಧ್ಯಕ್ಷರುಗಳು, ಗೌರವ ಮಾರ್ಗದರ್ಶಕರು, ಮಹಿಳಾ ಸಮಿತಿಯ ಅಧ್ಯಕ್ಷೆ ಸುಚಿತ್ರಾ ರಮೇಶ್, ಕಾರ್ಯದರ್ಶಿ ಅಸ್ಮಿತಾ ಸುರೇಶ್, ಕೋಶಾಧಿಕಾರಿ ವಿನೋದ ಶಿವರಾಮ, ಮಹಿಳಾ ಸಮಿತಿ ಸದಸ್ಯರುಗಳು, ರಾಯಿ ಗ್ರಾಮ, ಕೊಯಿಲ ಗ್ರಾಮ, ಅರಳ ಗ್ರಾಮಗಳ ಸಂಚಾಲಕರುಗಳು ಸಹಸಂಚಾಲಕರುಗಳು, ಎಲ್ಲಾ ಸಮಿತಿಯ ಸಂಚಾಲಕರುಗಳು, ಸಹಸಂಚಾಲಕರುಗಳು ಸದಸ್ಯರುಗಳು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.


ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ನಾರಾಯಣಗುರು ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ನೂತನವಾದ ಗುರುಗಳ ಮೂರ್ತಿಯನ್ನು ಟ್ಯಾಬ್ಲೋದಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಸುಮಾರು ೪೦ಕ್ಕೂ ಅಧಿಕ ಪಿಕಪ್ ವಾಹನಗಳಲ್ಲಿ ಹೊರೆಕಾಣಿಕೆಯು ಬಂಟ್ವಾಳ ಬೈಪಾಸ್ ರಸ್ತೆ ಮೂಲಕ ಲೊರೆಟ್ಟೋ, ಸೊರ್ನಾಡು, ಅಣ್ಣಳಿಕೆ, ಕೊಯಿಲ ಮಾರ್ಗವಾಗಿ ರಾಯಿ ಬಿಲ್ಲವ ಸಮಾಜ ಸೇವಾ ಮಂದಿರದಲ್ಲಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *