Breaking
21 Jun 2026, Sun

ಕಗ್ಗತ್ತಲಲ್ಲಿ ಪಾಕ್‌ ಮೇಲೆ ಭಾರತದ ಸೇನೆಯಿಂದ ವಾಯುದಾಳಿ

ನವದೆಹಲಿ: ಪಹಲ್ಗಾಮ್‌ ಮೇಲೆ ಪಾಕಿಸ್ತಾನದ ಉಗ್ರರು ಗುಂಡಿನ ದಾಳಿ ನಡೆಸಿ 26 ಭಾರತೀಯ ಹಿಂದೂ ಪುರುಷರನ್ನು ಹತ್ಯೆಗೈದ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ 9 ಪ್ರದೇಶಗಳ ಮೇಲೆ ವಾಯು ದಾಳಿ ನಡೆಸಿದೆ.

ಈ ದಾಳಿಗೆ ಆಪರೇಷನ್ ಸಿಂಧೂರ್(Operation Sindoor) ಎಂದು ಹೆಸರಿಡಲಾಗಿದೆ.


ಪಹಲ್ಗಾಮ್‌ ದಾಳಿ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರಂತರವಾಗಿ ಸಿದ್ಧತೆ ನಡೆಸುತ್ತಿತ್ತು. ದಾಳಿಯ ಕೆಲವು ದಿನಗಳ ನಂತರ, ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಲಾಯಿತು. ಹೀಗಾಗಿ ಇಂದು (ಮೇ 7 ) ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ.


ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಬಹವಾಲ್ಪುರ್, ಮುರಿಡೈ ಗುಲ್ಬುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ನೋಟ್ ಮತ್ತು ಮುಜಫರಾಬಾದ್ ಎಂಬ 9 ಉಗ್ರರ ತಾಣಗಳ ಮೇಲೆ ಭಾರತ ದಾಳಿ ನಡೆಸಿದೆ.
ಮುಜಫರಾಬಾದ್ ಬಳಿ ಪಾಕಿಸ್ತಾನ ಸೇನಾ ಸೈನಿಕರು ಭಾರತೀಯ ಸೇನೆಯ ಕ್ಷಿಪಣಿ ದಾಳಿಯಿಂದ ಹಾನಿಗೊಳಗಾದ ಕಟ್ಟಡವನ್ನು ಪರಿಶೀಲಿಸಿದ್ದಾರೆ.

ಭಾರತದ ಆಪರೇಷನ್ ಸಿಂಧೂರ್ ನಿಂದ ಪಾಕಿಸ್ತಾನ ನಡುಗುತ್ತಿದೆ. ಭಯೋತ್ಪಾದನೆಯ ವಿರುದ್ಧದ ಆಪರೇಷನ್ ಸಿಂಧೂರ್ ಕುರಿತು ಜಗತ್ತಿಗೆ ಸಂದೇಶ ಕಳುಹಿಸಲು ಭಾರತ ಸರ್ಕಾರ, ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿವೆ.

ಪಾಕಿಸ್ತಾನದಲ್ಲಿ ಅವ್ಯವಸ್ಥೆ ಸೃಷ್ಟಿ ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪ್ರಯಾಣಿಕರಿಗೆ ತಕ್ಷಣವೇ ಟರ್ಮಿನಲ್ ಖಾಲಿ ಮಾಡುವಂತೆ ಆದೇಶಿಸಲಾಗಿದೆ. ದಾಳಿಯ ನಂತರ, ಅನೇಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ವಾಯುದಾಳಿಯ ನಂತರ, ಪಾಕಿಸ್ತಾನದಾದ್ಯಂತ ಮತ್ತು ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆಯ ಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಲಾಹೋರ್ ಮತ್ತು ಸಿಯಾಲ್‌ಕೋಟ್ ವಿಮಾನ ನಿಲ್ದಾಣಗಳನ್ನು ಮುಂದಿನ 48 ಗಂಟೆಗಳ ಕಾಲ ಮುಚ್ಚಲಾಗಿದೆ.

Leave a Reply

Your email address will not be published. Required fields are marked *