Breaking
22 Mar 2026, Sun

ವಕೀಲರ ಸಂಘ(ರಿ), ಬಂಟ್ವಾಳ ಇದರ ನೂತನ ಅಧ್ಯಕ್ಷರಾಗಿ ರಿಚರ್ಡ್ ಕೋಸ್ತಾ ಎಂ ಮರು ಆಯ್ಕೆ

ಬಂಟ್ವಾಳ: ವಕೀಲರ ಸಂಘ (ರಿ), ಬಂಟ್ವಾಳ ಇದರ 2025-27ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ಶನಿವಾರ ಸಂಘದ ಕಚೇರಿಯಲ್ಲಿ ನಡೆಯಿತು. 

ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿ ರಿಚರ್ಡ್ ಕೋಸ್ತಾ ಎಂ ರವರು ಸ್ಪರ್ದಿಸಿದ್ದು, ಬಹುಮತದಿಂದ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆ ಯಾಗಿರುತ್ತಾರೆ.

ಉಪಾಧ್ಯಕ್ಷರಾಗಿ ದಯಾನಂದ ರೈ, ಪ್ರದಾನ ಕಾರ್ಯದರ್ಶಿಯಾಗಿ ಕೆ ನರೇಂದ್ರನಾಥ ಭಂಢಾರಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿಂತಾ ಕ್ರಾಸ್ತಾ ರವರು ಅವಿರೋಧವಾಗಿ ಆಯ್ಕೆ ಯಾಗಿರುತ್ತಾರೆ. ಅಧ್ಯಕ್ಷರ   ಚುನಾವಣೆಗಾಗಿ 244 ಅರ್ಹ ಮತದಾರರ ಪಟ್ಟಿಯಲ್ಲಿ 222 ಮತಗಳು ಚಲಾವಣೆ ಯಾಗಿದ್ದು ರಿಚರ್ಡ್ ಕೋಸ್ತಾ ಎಂ ರವರು 123 ಮತಗಳನ್ನು ಪಡೆದು ಜಯ ಗಳಿಸಿರುತ್ತಾರೆ. ವಕೀಲರಾದ ಎಚ್. ಸತೀಶ್ ರಾವ್ ರವರು ಮುಖ್ಯ ಚುನಾವಣಾಧಿಕಾರಿಯಾಗಿದ್ದು, ಕೆ. ವಿ. ಭಟ್ ಮತ್ತು ಎಂ. ವಿ. ಭಟ್ ರವರು ಉಪ ಚುನಾವಣಾ ಧಿಕಾರಿಗಳಾಗಿ ಸೀನಿಯರ್ ಕಮಿಟಿ ಸದಸ್ಯರಾದ ಎಂ. ಈಶ್ವರ ಉಪಾಧ್ಯಾಯ ರವರ ಮೇಲುಸ್ತುವಾರಿ ಯಲ್ಲಿ ಮತದಾನ ಪ್ರಕ್ರಿಯೆ ನಡೆದಿರುತ್ತದೆ.

Leave a Reply

Your email address will not be published. Required fields are marked *