Breaking
22 Mar 2026, Sun

ಬೆಂಜನಪದವು: ಶ್ರೀ ಜೈ ಹನುಮಾನ್ ಮಂದಿರದ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಧಾರ್ಮಿಕ ಸಭೆ

ಬಂಟ್ವಾಳ :ಶ್ರದ್ಧಾ ಕೇಂದ್ರಗಳು ಮತ್ತು ಭಜನಾ ಮಂದಿರಗಳು ಧರ್ಮ ಶಿಕ್ಷಣ ನೀಡುವ ಜ್ಞಾನ ಕೇಂದ್ರ ಗಳಾಗಬೇಕು .ಇಂದಿನ ಕಾಲಘಟ್ಟದಲ್ಲಿ ಧರ್ಮ ಶಿಕ್ಷಣ ನೀಡುವ ಅಗತ್ಯ ಬಹಳವಿದೆ, ಈ ನಿಟ್ಟಿನಲ್ಲಿ ಮಂದಿರಗಳು ಆಂತರಿಕ ಶಕ್ತಿ ತುಂಬಿಸುವ ಕೇಂದ್ರ ವಾಗಲಿ ಎಂದು ಧಾರ್ಮಿಕ ಉಪನ್ಯಾಸಕ , ಅಂಬಾವನ ಧರ್ಮ ಶಿಕ್ಷಣ ಕೇಂದ್ರದ ಅಧ್ಯಕ್ಷರು , ವಾಗ್ಮಿಗಳಾದಂತಹ ಡಾ ಅರುಣ್ ಉಳ್ಳಾಲ್ ತಿಳಿಸಿದರು.

ಮೇ.1ರ ಗುರುವಾರ ತಾಲೂಕಿನ ಕೊಡ್ಮಾಣ್ ಗ್ರಾಮದ ಪೊಡಿಕಲ ಶ್ರೀ ಜೈ ಹನುಮಾನ್ ಮಂದಿರದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭಾವೇದಿಕೆಯಲ್ಲಿ ಅವರು ಮಾತನಾಡಿದರು .

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀಜಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಯವರು ಪಾರಿಜಾತದ ಗಿಡ ಗೆಡುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ , ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ,ಸ್ಥಳ ದಾನಿಗಳಾದ ಗುಂಡಿಲ ಗುತ್ತು ಅಜಿತ್ ಕುಮಾರ್ ಶೆಟ್ಟಿ, ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ , ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಸಮಿತಿ ಗೌರಾವಾಧ್ಯಕ್ಷರಾದ ಕೊಟ್ಟಿಂಜ ಪದ್ಮನಾಭ ಶೆಟ್ಟಿ , ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ, ಉಮೇಶ್ ಸಾಲ್ಯಾನ್ ಬೆಂಜನಪದವು ,ಸತೀಶ್ ಶೆಟ್ಟಿ ಪೋಡಿಕಲ, ಚಿತ್ತರಂಜನ್ ಕಂಬ್ಲ , ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯ , ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಗೋಪಾಲ್ ಗೋವಿಂದೊಟ ಧನ್ಯವಾದವಿತ್ತು ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *