Breaking
22 Mar 2026, Sun

ಇಂದು ಗಂಜಿಮಠ ಶ್ರೀ ಶಿವಕ್ಷೇತ್ರದಲ್ಲಿ ರುದ್ರಯಾಗ

ಗಂಜಿಮಠ: ಶ್ರೀ ಶಿವಕ್ಷೇತ್ರ ಗಂಜಿಮಠ ಪುನರ್ ನಿರ್ಮಾಣಕ್ಕೆ ಮುನ್ನುಡಿಯಾಗಿ 108 ಕಾಯಿ ಗಣಯಾಗ ಹಾಗೂ 48 ದಿನಗಳ ಸಂಧ್ಯಾ ಭಜನೆ ಕಾರ್ಯಕ್ರಮದ ಕೊನೆಯ ಹಂತವಾಗಿ ಶ್ರೀ ಟಿ. ಮುರಳೀಧರ ತಂತ್ರಿ ಬಡಗ ಎಡಪದವು ಇವರ ದಿವ್ಯ ಹಸ್ತದಿಂದ ಇಂದು (ಏ.30) ರುದ್ರಯಾಗ ನಡೆಯಲಿದೆ.

11-30ಕ್ಕೆ ಪೂರ್ಣಾಹುತಿ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ ಗಂಟೆ 2-00ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ʼಯಕ್ಷ ಗಾನ ಹಾಸ್ಯ ವೈಭವʼ ಅನಾವರಣಗೊಳ್ಳಲಿದೆ.

ಸಂಜೆ ಗಂಟೆ 5-30ರಿಂದ 8-30ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಕೇಳಿಕೊಂಡಿದೆ.

Leave a Reply

Your email address will not be published. Required fields are marked *