Breaking
20 Jun 2026, Sat

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕರ ಮೇಲಿನ ದಾಳಿಗೆ ಖಂಡನೆ :ಪ್ರಭಾಕರ ಪ್ರಭು

Prabhu

ಸಿದ್ದಕಟ್ಟೆ: ಜಮ್ಮು ಕಾಶ್ಮೀರದ ಅನಾಂತನಾಗ್ ಜಿಲ್ಲೆಯ ಪಹಲ್ಗಾಮ್ ನ್ನು ಮಿನಿ ಸ್ವಿಜರ್ಲೆಂಡ್ ನಲ್ಲಿ ಲಷ್ಕರ್ ಸಂಬಂಧಿತ ಭಯೋತ್ಪಾದಕರು ನಡೆಸಿದ ಕ್ರೂರ ದಾಳಿಯಿಂದ ಕರ್ನಾಟಕದ ಎರಡು ಜನ ಸಮೇತ ಒಟ್ಟಿಗೆ 27 ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಮೃತ ಪಟ್ಟಿದ್ದು ,ಹಲವು ಮಂದಿಗೆ ತೀವ್ರತರದ ಗಾಯಾಗಳಾಗಿದ್ದು ,ಈ ದಾಳಿಗೆ ಕಾರಣಿಕರ್ತವಾದ ಲಷ್ಕರ್-ಎ-ತೊಯ್ಬಾ ಬಾದ ಸಂಘಟನೆಯ ಕ್ರೂರ ಕೃತ್ಯಕ್ಕೆ ಬಿ ಜೆ ಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಖಂಡನೆ ವ್ಯಕ್ತಪಡಿಸಿದ್ದಾರೆ .

ಹಾಡುಹಾಡಗಲೇ ಕುಟುಂಬದ ಸದಸ್ಯರ ಸಮ್ಮುಖದಲ್ಲೇ ನಡೆದ ಈ ಹೇಯ ಕೃತ್ಯ ದೇವರು ಮೆಚ್ಚುವಂತದ್ದಲ್ಲ. 2019ರ ಪುಲ್ವಾಮ ದಾಳಿ ನಂತರದ ಈ ಭಯನಕ ಕೃತ್ಯ ನಡೆದಿದ್ದು ,ಉಗ್ರರನ್ನು ಈಗಲೇ ಬುಡ ಸಮೇತ ಮಟ್ಟ ಹಾಕದಿದ್ರೆ ಉಗ್ರರ ಕೃತ್ಯಗಳು ದೇಶ ವ್ಯಾಪ್ತಿಯಲ್ಲಿ ಹರಡುವ ಭೀತಿ ಸಂಭವಿಸಬಹುದು .ರಾಷ್ಟ್ರ ರಕ್ಷಣೆಯ ಜೊತೆಗೆ ಭದ್ರತೆಯ ವಿಷಯದಲ್ಲಿ ಭಾರತೀಯರೆಲ್ಲರೂ ರಾಜಕೀಯ ಮಾಡಿಕೊಳ್ಳದೇ ರಾಜಕೀಯ ಮತ್ತು ಧರ್ಮವನ್ನು ಬದಿಗೊತ್ತಿ ರಾಷ್ಟ್ರದ ಉಳಿವಿಗಾಗಿ ಬೆಂಬಲ ವ್ಯಕ್ತಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದಲ್ಲಿ ಉಗ್ರರಿಂದ ನಡೆದಿದೆ ಎನ್ನಲಾದ ಈ ನರಮೇಧ ಹೇಯ ಕೃತ್ಯದ ನಡುವೆ ಭಾರತದಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದನ್ನು ಇಡಿ ವಿಶ್ವವೇ ನೋಡಿರುತ್ತದೆ. ಈ ರೀತಿಯ ಹೆಣಗಳ ಮೇಲೆ ಸಂಭ್ರಮಾಚರಣೆ ನಡವಳಿಕೆಯಿಂದ ಮುಂದೊಂದು ದಿನ ಪಾಕಿಸ್ತಾನ ಸರ್ವ ನಾಶವಾಗಲಿದೆ ಎಂದರು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಉಗ್ರರ ಭೇಟೆಗಾಗಿ ಕೈಗೊಂಡ ದಿಟ್ಟ ನಿರ್ಧಾರ ಮತ್ತು ಪಾಕಿಸ್ತಾನದ ಮೇಲಿನ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿದ್ದಕ್ಜೆ ಪ್ರಧಾನಿ ನೇತೃತ್ವದ ಕೇಂದ್ರ ಮಂತ್ರಿಮಂಡಲಕ್ಕೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *