Breaking
22 Mar 2026, Sun

ಕುಮ್ಡೆಲು: ಎ. 20 ರಿಂದ-25ರವರೆಗೆ ಶ್ರೀ ನಾಗಬ್ರಹ್ಮ ಸನ್ನಿಧಿ ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಸ್ಥಾನದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, 75ನೇ ವಾರ್ಷಿಕ ನೇಮೋತ್ಸವ

ಏ. 20ರಿಂದ 25ರ ತನಕ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, 75ನೇ ವಾರ್ಷಿಕ ನೇಮೋತ್ಸವ.

ಏ. 20ರಂದು ಫರಂಗಿಪೇಟೆ ಶ್ರೀ ವೀರಾಂಜನೇಯ ದೇವಸ್ಥಾನದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ಇಲ್ಲಿನ ಪುದು ಮತ್ತು ತುಂಬೆ ಗ್ರಾಮದ ಗಡಿ ಭಾಗದಲ್ಲಿ ಸುಮಾರು 75ವರ್ಷಗಳ ಇತಿಹಾಸವಿರುವ ಕಾರಣಿಕ ಪ್ರಸಿದ್ಧ ಕುಮ್ಡೆಲು ಶ್ರೀ ನಾಗಬ್ರಹ್ಮ ಸನ್ನಿಧಿ, ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಸ್ಥಾನ ವು ಪುನರ್ ನಿರ್ಮಾಗೊಂಡು ಶಿಲಾಮಯ ದೈವಾಲಯದಲ್ಲಿ ಏ. 20ರಿಂದ 25ರ ತನಕ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು 75ನೇ ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪ್ರಧಾನ ಸಂಚಾಲಕ ತೇವು ತಾರಾನಾಥ ‌ಕೊಟ್ಟಾರಿ ಹೇಳಿದರು.

ಇಲ್ಲಿನ ಕುಮ್ಡೆಲು ನಾಗಬ್ರಹ್ಮ ಸನ್ನಿಧಿ ಕೋರ್ದಬ್ಬು ತನ್ನಿಮಾನಿಗ ದೈವಸ್ಥಾನದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೇವಲ 6 ತಿಂಗಳ ಅವಧಿಯಲ್ಲಿ ಸುಮಾರು ರೂ 1.25 ಕೋಟಿ ವೆಚ್ಚದಲ್ಲಿ ದೈವಸ್ಥಾನ ಶಿಲಾಮಯಗೊಂಡಿದೆ ಎಂದರು.

ಕ್ಷೇತ್ರದ ಆಡಳಿತ ಮೋಕ್ತೆಸರ ಭಾಸ್ಕರ ಚೌಟ ಕುಮ್ದೇಲು ಮಾತನಾಡಿ, ‘ ಇಲ್ಲಿನ ಮುಂಡಾಲ ಸಮುದಾಯದ ಮಾಂಕು ಮುಕಾರಿ ಅವರು 25 ಸೆಂಟ್ಸ್ ಜಮೀನು ಕೊಡುಗೆ ನೀಡಿದ್ದು, ಉಳಿದ 25 ಸೆಂಟ್ಸ್ ಜಮೀನು ಭಕ್ತರೇ ಖರೀದಿಸಿದ್ದಾರೆ.ಇಲ್ಲಿನ ಪ್ರತಿ ಮನೆಯಿಂದ ವಾರಕ್ಕೆ ತಲಾ ರೂ 500ರಂತೆ ಒಟ್ಟು ರೂ. 18ಲಕ್ಷ ದೇಣಿಗೆ ನೀಡಿದ್ದಾರೆ. ಮಾತ್ರವಲ್ಲದೆ ಪ್ರತಿದಿನ ನೂರಾರು ಮಂದಿ ಯುವಕರು ಶ್ರಮದಾನ ನಡೆಸಿದ್ದಾರೆ ‘ ಎಂದರು.

ಏ. 20ರಂದು ಫರಂಗಿಪೇಟೆ ಶ್ರೀ ವೀರಾಂಜನೇಯ ದೇವಸ್ಥಾನ ದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಒಟ್ಟು 5 ದಿನಗಳಲ್ಲಿ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಮಾರ್ಗದರ್ಶನ ದಲ್ಲಿ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಗಳ ಜೊತೆಗೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ‘ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ, ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಪ್ರಧಾನ ಕಾರ್ಯದರ್ಶಿ ಭರತ್ ಕುಮ್ಡೆಲು, ಪ್ರಮುಖರಾದ ವೆಂಕಪ್ಪ ಗುರಿಕಾರ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ರಾಧಾಕೃಷ್ಣ ತಂತ್ರಿ ಬೆಂಜನಪದವು, ಪದ್ಮನಾಭ ಶೆಟ್ಟಿ ಪುಂಚಮೆ, ಹರಿಕೃಷ್ಣ ಪಂಡಿತ್, ಶಾಂತ ಡಿ ಚೌಟ, ವಿದ್ಯಾ ಶೇಖರ್, ಸೀತಾ ರಾಜೇಶ್ ಕೋಟ್ಯಾನ್, ಗೀತಾ ರವಿ ಕುಮ್ಡೆಲು, ನವೀನ್ ಸುರಭಿ ಕೊಡ್ಮಾಣ್, ಮನೋಜ್ ಆಚಾರ್ಯ ನಾಣ್ಯ,ಮತ್ತಿತರರು ಇದ್ದರು.

Leave a Reply

Your email address will not be published. Required fields are marked *