ಬಂಟ್ವಾಳ: ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆ ಬಳಿಯ ತುಂಬೆ ಗ್ರೌಂಡ್ಸ್ ನಲ್ಲಿ ಎ.11ರಿಂದ ಎ.13 ರವರೆಗೆ ನಡೆಯಲಿರುವ ತುಂಬೆ ಫೆಸ್ಟ್ -2025 ಕಾರ್ಯಕ್ರಮವನ್ನು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸರ್ವ ಧರ್ಮವೂ ಶ್ರೇಷ್ಠವಾದುದು. ಅದು ಎಲ್ಲರನ್ನೂ ಒಗ್ಗೂಡಿಸುತ್ತದೆ. ದೇಶ ಬೆಳೆಯಬೇಕಾದರೆ ಪ್ರಜ್ಞಾವಂತ ಪ್ರಜೆಗಳು ಅಭಿವೃದ್ಧಿಯಾಗಬೇಕು ಎಂದರು.
ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ. ವಲೇರಿಯನ್ ಡಿಸೋಜ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತ ಮಾತೆಯ ಮಕ್ಕಳೆಲ್ಲಾ ಒಂದೇ ಎಂಬ ಭಾವನೆ ಬೆಳೆದು ಮಾನವೀಯತೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಮೇಳದಲ್ಲಿ ಯೇನೆಪೋಯ ಮಹಿಳಾ ಆರೋಗ್ಯ ಸಂಚಾರಿ ಆಸ್ಪತ್ರೆಯ ವತಿಯಿಂದ ಆರೋಗ್ಯ ತಪಾಸಣೆ, ತೋಟಗಾರಿಕಾ ಇಲಾಖೆಯ ಯಂತ್ರೋಪಕರಣ ಪ್ರದರ್ಶನ, ಸಿರಿಧಾನ್ಯ ಮಾರಾಟ, ಸ್ತ್ರೀ ಶಕ್ತಿ ಸಂಘಟನೆಯ ವಿವಿಧ ಮಳಿಗೆಗಳು ಗಮನ ಸೆಳೆದವು. ಯೇನೆಪೋಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

ಅಲ್ ಹಾಜ್ ಕೆ.ಪಿ.ಇರ್ಷಾದ್ ದಾರಿಮಿ ಮಿತ್ತಬೈಲ್ ಅತಿಥಿಯಾಗಿ ಭಾಗಿಯಾಗಿದ್ದು, ಜೊತೆಗೆ ಫೆಸ್ಟ್ ಸಂಯೋಜಕರಾದ ಬಿ.ಎಂ.ಅಶ್ರಫ್, ತುಂಬೆ ಬಿ.ಎ.ಗ್ರೂಪ್ ಎಂ.ಡಿ. ಬಿ.ಅಬ್ದುಲ್ ಸಲಾಂ,ಐಟಿಐ ಕಾಲೇಜಿನ ಪ್ರಾಂಶುಪಾಲ ನವೀನ ಕುಮಾರ್ ಕೆ.ಎಸ್. ಪಿಯು ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಭಟ್ ಶಿಕ್ಷಕರಾದ ಜಗದೀಶ ರೈ, ಸಾಯಿ ರಾಮ್ ,ದಿನೇಶ್ ಶೆಟ್ಟಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.



