Breaking
22 Sep 2026, Tue

ಚಲಿಸುತ್ತಿದ್ದ ಕಾರಿನಲ್ಲಿ ಹುಚ್ಚಾಟ ಯುವಕರು ಪೊಲೀಸ್‌ ವಶಕ್ಕೆ

ಸುಳ್ಯ: ಸಂಪಾಜೆ ಭಾಗದಿಂದ ಸುಳ್ಯದತ್ತ ವೇಗವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಯುವಕರ ತಂಡ ಹುಚ್ಚಾಟ ಮೆರೆದ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಕುರಿತು ಸುಳ್ಯ ಪೊಲೀಸರು ಸುಮೋಟೋ ಕೇಸ್‌ ದಾಖಲಿಸಿ, ಯುವಕರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ.


ಕಾರಿನಲ್ಲಿದ್ದ 7 ಮಂದಿ ಭಟ್ಕಳದವರು ಎಂದು ತಿಳಿದು ಬಂದಿದ್ದು, ಅವರು ಮಡಿಕೇರಿಯಿಂದ ಭಟ್ಕಳಕ್ಕೆ ತೆರಳುವ ವೇಳೆ ಈ ರೀತಿ ಪುಂಡಾಟ ಮೆರೆದಿದ್ದಾರೆ. ಸಾಜೀಲ್‌ ಎಂಬಾತ ಕಾರನ್ನು ಚಾಲನೆ ಮಾಡುತ್ತಿದ್ದು, ಅತೀಫ್‌, ಸುಮನ್‌, ಜಯೇಶ್‌ (ಬಂದಿಲ್ಲ), ಸಾಜೀಬ್‌, ಸಾಹಿಬಝ್, ಹಸನ್‌ ಎಂಬವರು ಕಾರಿನ ಮೇಲೆ ಪುಂಡಾಟ ಮೆರೆದವರು ಎಂದು ತಿಳಿದುಬಂದಿದೆ.
ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನಲೆ :
ಸಂಪಾಜೆಯಿಂದ ಸುಳ್ಯದತ್ತ ಅತಿ ವೇಗವಾಗಿ ಚಲಿಸುತ್ತಿರುವ ಕಾರಿನ ಮೇಲ್ಭಾಗ, ಅಂದ್ರೆ ಸನ್ ರೂಫ್ ಓಪನ್‌ ಮಾಡಿ, ಇಬ್ಬರು ಯುವಕರು ಮೇಲೆ ಬಂದಿದ್ದು, ಇನ್ನಿಬ್ಬರು ಯುವಕರು ಹಿಂದಿನ ಸೀಟಿನ ಎಡ ಮತ್ತು ಬಲಬದಿಯ ಕಿಟಕಿ ಬಾಗಿಲಿನಿಂದ ಹೊರ ಬಂದಿದ್ರು. ಮತ್ತಿಬ್ಬರು ಮುಂದಿನ ಭಾಗದ‌ ಕಿಟಕಿಯಿಂದ ಹೊರ ಬಂದು ಹುಚ್ಚಾಟ ಮೆರೆದಿದ್ದರು.
ಯುವಕರು ಕಾರಿನಲ್ಲಿ ಈ ರೀತಿಯಾಗಿ ಹುಚ್ಚಾಟ ಮೆರೆದ ದೃಶ್ಯವನ್ನು ಹಿಂದಿನಿಂದ ಕಾರಿನಲ್ಲಿ ಬರುತ್ತಿರುವವರು ಚಿತ್ರೀಕರಿಸಿಕೊಂಡಿದ್ದು ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ ಬೆನ್ನಲ್ಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾರ್ಯಾಚರಣೆಗಿಳಿದಿದ್ದರು. ಪ್ರಕರಣ ದಾಖಲಾಗುತ್ತಿದ್ದ ಯುವಕರು ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದರು.

Leave a Reply

Your email address will not be published. Required fields are marked *