Breaking
21 Mar 2026, Sat

ಪೂಂಜ: ಏ. 12ರಿಂದ 16ರ ತನಕ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ

ಸಿದ್ಧಕಟ್ಟೆ: ಆರಂಬೋಡಿ ಗ್ರಾಮದ ಪ್ರಸಿದ್ಧ ಪೂಂಜ, ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏ.12ರಿಂದ 16ರ ತನಕ ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.

ಏ.11ರಂದು ಸಂಜೆ ಸಿದ್ಧಕಟ್ಟೆ ಕೇಂದ್ರ ಮೈದಾನದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, . ಏ.12, 13 ಮತ್ತು 15ರಂದು ಬೆಳಿಗ್ಗೆ ಚಂಡಿಕಾಯಾಗ ನಡೆಯಲಿದೆ. 14ರಂದು ಸಂಜೆ ನಡುಬಲಿ ಉತ್ಸವ ಮತ್ತು 15ರಂದು ಮಧ್ಯಾಹ್ನ ರಥೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ ಚೆಂಡು ಉತ್ಸವ ಮತ್ತು ವಿವಿಧ ನಾಟಕ, ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ.

ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಏ.16ರಂದು ರಾತ್ರಿ 10 ಗಂಟೆಗೆ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *