Breaking
22 Mar 2026, Sun

ಮೂಡುಬಿದಿರೆ: ಬಾವಿಗೆ ಬಿದ್ದ ಚಿರತೆ ಅರಣ್ಯಾಧಿಕಾರಿಗಳಿಂದ ರಕ್ಷಣೆ

ಮೂಡುಬಿದಿರೆ: ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಶಿರ್ತಾಡಿ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಮಕ್ಕಿ ನಿವಾಸಿ ರಮೇಶ ಪೂಜಾರಿ ಎಂಬವರ ಮನೆಯ ಬಾವಿಗೆ ಚಿರತೆ ಬಿದ್ದಿದ್ದು, ಬಳಿಕ ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದರು.

ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ ನಿರ್ದೇಶನದಂತೆ, ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಾವ್ಯಾ ಆರ್., ರಾಘವೇಂದ್ರ ಶೆಟ್ಟಿ, ಬಸಪ್ಪ ಹಲಗೇರ, ಗಸ್ತು ಅರಣ್ಯ ಪಾಲಕರಾದ ಧರ್ಮರಾಜ, ಮಂಜುನಾಥ ಮಳ್ಳಿ, ರಾಜೇಶ್, ಚಂದ್ರಶೇಖರ್, ಅರಣ್ಯ ವೀಕ್ಷಕರಾದ ಜನಾರ್ದನ, ರಂಜನ್, ವಾಹನ ಚಾಲಕ ಮಿಥುನ್ ಕಾರ್ಯಾಚರಣೆ ಮೂಲಕ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

Leave a Reply

Your email address will not be published. Required fields are marked *