Breaking
22 Mar 2026, Sun

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾಗಿ ಜಗನ್ನಾಥ್ ಸಾಲಿಯಾನ್ ಪುನರಾಯ್ಕೆ: ಉಪಾಧ್ಯಕ್ಷರಾಗಿ ಮನೋರಂಜನ್ ಕೆ. ಆರ್

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಮುಂದಿನ 5 ವರ್ಷಗಳ ಸಾಲಿಗೆ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗನ್ನಾಥ ಸಾಲಿಯಾನ್ ಹೆಚ್. ಮತ್ತು ಉಪಾಧ್ಯಕ್ಷರಾಗಿ ಮನೋರಂಜನ್ ಕೆ ಆರ್. ಆಯ್ಕೆಯಾದರು.

ಈ ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಶಿವಲಿಂಗಯ್ಯ ಎಂ, ನಡೆಸಿಕೊಟ್ಟರು. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ ಸಹಕರಿಸಿದರು.ಆಡಳಿತ ಮಂಡಳಿ ಸದಸ್ಯರಾಗಿ ಕೇಶವ ಎ, ಗೋವರ್ಧನ್ ಕುಮಾರ್ ಐ, ಭಾಸ್ಕರ ಶೆಟ್ಟಿ, ರಾಮದಾಸ್ ಶೆಣೈ ವಿ, ಮೋಹನ್ ಕೆ ಎಸ್, ವಿಶ್ವನಾಥ ಎಂ,ತಿರುಮಲೇಶ್ವರ ಭಟ್ ಪಿ, ಸತೀಶ್ ಪಿ, ಜಯಂತಿ ಹೆಚ್. ರಾವ್, ಶುಭಲಕ್ಷ್ಮಿ, ದಯಾನಂದ ಆಳ್ವ ಕೆ, ಪೂವಪ್ಪ ಎಸ್, ದಿವಾಕರ ವಿ. ಆಯ್ಕೆಯಾಗಿದ್ದಾರೆ.

ಆಯ್ಕೆ ಪ್ರಕ್ರಿಯೆಯ ಪೂರ್ವದಲ್ಲಿ ಅಧ್ಯಕ್ಷ ಗಾದಿಗೆ ಮತ್ತೋರ್ವ ಅಪೇಕ್ಷಿತರಿದ್ದರು. ಇದರಿಂದ ಚುನಾಯಿತ ಅಭ್ಯರ್ಥಿಗಳ ಮಧ್ಯೆ ಬಹುಮತ ಸಾಬೀತು ನಡೆಯಿತು.

ಬಹುಮತ ಆಧಾರದಲ್ಲಿ ಆಯ್ಕೆಯಾದ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಹೆಚ್ ಹಾಗೂ ಉಪಾಧ್ಯಕ್ಷರನ್ನು ಬಿಜೆಪಿ ಪಕ್ಷದ ಕಚೇರಿಯಲ್ಲಿ ಅಭಿನಂದಿಸಲಾಯಿತು.

ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಎಸ್. ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಪುಣಚ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಹರಿಪ್ರಸಾದ್ ಯಾದವ್, ಉದಯ ಆಲಂಗಾರು, ಶ್ರೀಕೃಷ್ಣ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *