Breaking
22 Mar 2026, Sun

ಗೋವಿನತೋಟ:ನಂದಿರಥ ಯಾತ್ರೆ ಮಂಗಳಾಚರಣೆ ಹಾಗೂ ಶ್ರೀರಾಮನವಮಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ :ಗೋ ಸೇವಾ ಗತಿವಿಧಿ ಕರ್ನಾಟಕ ಶ್ರೀ ರಾಧಾ ಸುರಭಿ ಗೋ ಮಂದಿರ ಬ್ರಹ್ಮಗಿರಿ, ಗೋವಿನತೋಟ ಇದರ ಅಶ್ರಯದಲ್ಲಿ 95 ದಿನ ಕರ್ನಾಟಕ ರಾಜ್ಯಾದ್ಯಂತ ಸಂಚರಿಸಿದನಂದಿರಥ ಯಾತ್ರೆಯ ಮಂಗಳಾಚರಣೆ ಹಾಗೂ ಶ್ರೀರಾಮನವಮಿ ಉತ್ಸವವು ಎ.06ರಂದು ನಡೆಯಲಿದ್ದು ಇದರ ಅಂಗವಾಗಿ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾ.19ರಂದು ಸಂಜೆ ಶ್ರೀ ರಾಧಾಸುರಭಿ ಗೋಮಂದಿರದಲ್ಲಿ ನಡೆಯಿತು.

ಶ್ರೀ ರಾಧಾಸುರಭಿ ಗೋಮಂದಿರದ ಭಕ್ತಿಭೂಷಣ್ ಪ್ರಭೂಜಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಗೋವಿಗೆ ರಾಷ್ಟ್ರೀಯ ಮಾನ್ಯತೆ ದೊರೆಯಬೇಕೆಂಬ ಸಂಕಲ್ಪದೊಂದಿಗೆ ನಂದಿ ರಥ ಯಾತ್ರೆ ಪ್ರಾರಂಭವಾಗಿದ್ದು ಈಗ ಸಮಾಜದ ಪ್ರತಿಯೊಬ್ಬರನ್ನು ಭಾವನಾತ್ಮಕವಾಗಿ ಸಂಬಂಧ ಬೆಸೆಯುತ್ತಿದೆ, ದೇಸಿ ಗೋವಿನ ಜಾಗೃತಿ, ವಿಷಮುಕ್ತ ಆಹಾರ ಹಾಗೂ ಪರಿಸರ, ಕೃಷಿ ಪದ್ಧತಿ, ಆರೋಗ್ಯಯುತ ಸಮಾಜದ ನಿರ್ಮಾಣವೇ ರಥಯಾತ್ರೆಯ ಆಶಯ,ಗೋ ಸಂತತಿ ಉಳಿದರೆ ಧರ್ಮ ಉಳಿದಿತು ಎಂದು ಹೇಳಿದರು.

ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು, ನಂದಿರಥ ಯಾತ್ರೆಯ ಮಂಗಳಾಚರಣೆ ಹಾಗೂ ಶ್ರೀರಾಮನವಮಿ ಉತ್ಸವದ ಆಚರಣೆಯ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಬಾ ಜ ಪ ಮಂಗಳೂರು ಮಂಡಲ ಒ ಬಿ ಸಿ ಮೋರ್ಚಾದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಬಾ ಜ ಪ ಜಿಲ್ಲಾ ಪಲಾನುಭವಿ ಪ್ರಕೋಷ್ಠದ ಸಂಚಾಲಕಿ ಜಯಶ್ರೀ ಕರ್ಕೇರ, ಗೋ ರಥಯಾತ್ರೆ ಸಮಿತಿಯ ಸಂಘಟನಾ ಕಾರ್ಯದರ್ಶಿ ಅನಿಲ್ ಪಂಡಿತ್, ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ, ಪ್ರಮುಖರಾದ ರಾಮಚಂದ್ರ ಬಂಗೇರ ಮಾರಿಪಲ್ಲ,ಸುಕೇಶ್ ಶೆಟ್ಟಿ ತೇವು, ನವೀನ ಚಾಪೆ, ಜಗದೀಶ ಕಡೆಗೋಳಿ, ವಿನಯ ಕುಮಾರ್, ಸಂದೇಶ್ ದರಿಬಾಗಿಲು, ಪ್ರವೀಣ್ ಕಬೇಲ, ಸದಾನಂದ ನೆತ್ತರಕೆರೆ, ಉಮಾ ಚಂದ್ರಶೇಖರ್, ನವೀನ್ ರಾಮಲ್ ಕಟ್ಟೆ, ದಯಾನಂದ ಜಾರಂದಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

ಎ.06ರಂದು ಬೆಳಿಗ್ಗೆ ಗಂಟೆ 9.00ಕ್ಕೆ ಸರಿಯಾಗಿ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಂದಿ ರಥ ಸ್ವಾಗತ,ನಂತರ ವಾಹನ ಜಾಥದ ಮೂಲಕ ರಾಧಾ ಸುರಭಿ ಗೋಮಂದಿರಕ್ಕೆ ಆಗಮಿಸಿ, ಮಂಗಳಾಚರಣೆ, ನಂತರ ಪರಿವಾರ ಸಹಿತ ಶ್ರೀ ರಾಮದೇವರಿಗೆ ಅಭಿಷೇಕ, ಅಭಿನಂದನಾ ಸಭೆ, ಪ್ರಸಾದ ಭೋಜನ ನಡೆಯಲಿದೆ.

Leave a Reply

Your email address will not be published. Required fields are marked *