Breaking
22 Mar 2026, Sun

ಮಾಣಿ: ನಾರಾಯಣಗುರು ಮಂದಿರ ಶಿಲಾನ್ಯಾಸ, ನಾರಾಯಣಗುರು ಸಹಕಾರ ಸಂಘದ ಉದ್ಘಾಟನೆ

ವಿಟ್ಲ: ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘ (ರಿ) ಮಾಣಿ ಇದರ ಆಶ್ರಯದಲ್ಲಿ ಶ್ರೀ ನಾರಾಯಣಗುರು ಮಂದಿರ, ಶ್ರೀ ಅನ್ನಪೂರ್ಣೇಶ್ವರಿಥ ಗುಡಿ ಮತ್ತು ಶ್ರೀ ನಾರಾಯಣ ಗುರು ಸಮುದಾಯ ಭವನದ ಶಿಲಾನ್ಯಾಸ ಹಾಗೂ ಶ್ರೀ ನಾರಾಯಣಗುರು ಸಹಕಾರ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ, ಜುನಾ ಅಖಾಡ ಮಹಾಮಂಡಲೇಶ್ವರ, ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪರಮ ಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸಾಮಾಜಿಕ ಪ್ರಗತಿಗೆ ಪೂರಕವಾಗುವ ಪ್ರತಿಯೊಂದು ಕಾರ್ಯಗಳಲ್ಲಿ ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವ ಸಿದ್ಧಾಂತಗಳು ನಿಜ ಅರ್ಥದಲ್ಲಿ ಅನುಷ್ಠಾನಗೊಳ್ಳುತ್ತವೆ. ಉತ್ತಮ ಕಾರ್ಯಗಳ ಮೂಲಕ ಮುಂದಡಿಯಿಟ್ಟಾಗಲೇ ಸಾಧನೆಗಳ ಶಿಖರಗಳು ಗೋಚರಿಸುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಧಾರ್ಮಿಕ ದತ್ತಿ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಪುರಸಭಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ವಕೀಲ ಅಶ್ವಿನಿ ಕುಮಾರ್ ರೈ, ಡಾ.ವಿದ್ಯಾಸಾಗರ್ ಕಾಗೆಕಾನ, ಹರೀಶ್ ಆಳ್ವ ಬದಿಗುಡ್ಡೆ, ಬಿಲ್ಲವ ಮುಖಂಡರಾದ ಚೆನ್ನಪ್ಪ ಕೋಟ್ಯಾನ್, ಜಯಂತ ನಡುಬೈಲು, ಜಯಂತಿ ವಿ.ಪೂಜಾರಿ, ರವಿ ಪೂಜಾರಿ ಚಿಲಿಂಬಿ, ಶೈಲೇಂದ್ರ ಸುವರ್ಣ, ಸಂಜೀವ ಪೂಜಾರಿ ಗುರುಕೃಪಾ, ಕೆ.ಸಂಜೀವ ಪೂಜಾರಿ ಬಿರ್ವ ಸೆಂಟರ್, ಮಾಣಿ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಎಂ, ಮಾಣಿ ಯುವವಾಹಿನಿ ಅಧ್ಯಕ್ಷ ನಾಗೇಶ್ ಪೂಜಾರಿ ಕೊಂಕೋಡಿ, ಮಹಿಳಾ ಘಟಕದ ಅಧ್ಯಕ್ಷೆ ಹರಿಣಾಕ್ಷಿ ಮುರುವು, ಬಿಲ್ಲವ ಮುಖಂಡರಾದ ವಿಜಯ ಕುಮಾರ್ ಸೊರಕೆ, ಮನೋಜ್ ಕುಮಾರ್ ಕಟ್ಟೆಮಾರ್, ಸತೀಶ್ ಕುಮಾರ್ ಕೆಡೆಂಜಿ, ಕೂಸಪ್ಪ ಪೂಜಾರಿ, ರಾಮಣ್ಣ ಪೂಜಾರಿ ಅರ್ಬಿ, ಮೋಹನ್ ಕುಮಾರ್ ಪೆರ್ಲಾಪು, ಕೃಷ್ಣಾನಂದ ಬರೆಂಗಾಯಿ, ನಾರಾಯಣ ಪೂಜಾರಿ ಮುರ್ವ, ಬಿಲ್ಲವ ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ ಹಿರ್ತಡ್ಕ ಕಡೇಶಿವಾಲಯ ಇನ್ನಿತರರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಸೂರ್ಯ ವಹಿಸಿದ್ದರು.ಕಟ್ಟಡ ಸಮಿತಿ ಅಧ್ಯಕ್ಷ ನಾರಾಯಣ ಸಾಲ್ಯಾನ್ ಅನಂತಾಡಿ ಸ್ವಾಗತಿಸಿದರು. ಸಲಹಾ ಸಮಿತಿ ಅಧ್ಯಕ್ಷ ಸೋಮಪ್ಪ ಪೂಜಾರಿ ಮಾದೇಲು ವಂದಿಸಿದರು. ಪ್ರಶಾಂತ್ ಅನಂತಾಡಿ, ರೇಣುಕಾ ಕಣಿಯೂರು, ರಾಜೇಶ್ ಬಲ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *