Breaking
19 Sep 2026, Sat

ಬಳಂತಿಮೊಗರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಮೇಲ್ಛಾವಣಿ ಕಾರ್ಯಕ್ಕೆ ಮೂಹೂರ್ತ

ವಿಟ್ಲ: ಪುಣಚ ಗ್ರಾಮದ ಬಳಂತಿಮೊಗರು ಎಂಬಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು, ಶ್ರೀ ಕ್ಷೇತ್ರದಲ್ಲಿ ಬೆಮ್ಮೆರೆ ಗುಂಡ ಹಾಗೂ ಬೈದರ್ಕಳ ಗರಡಿ ಮೇಲ್ಛಾವಣಿ ಮರದ ಕೆಲಸಕ್ಕೆ ಮೂಹೂರ್ತ ನಡೆಯಿತು.

ಶ್ರೀ ದೇವರು, ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಾಷ್ಠ ಶಿಲ್ಪಿಗಳ ಮೂಲಕ ವಿಧಿವಿಧಾನಗಳು ನಡೆದವು.ಈ ಸಂದರ್ಭದಲ್ಲಿ ಕಣಿಹಿತ್ತಿಲು ತರವಾಡಿನ ಯಜಮಾನರಾದ ಕೊರಗಪ್ಪ ಪೂಜಾರಿ ಕಾಸರಗೋಡು, ಬಾಳೆಕಲ್ಲು ಗರಡಿಯ ಮುಖ್ಯಸ್ಥರಾದನಾರಾಯಣ ಪೂಜಾರಿ ಬಾಳೆಕಲ್ಲು, ಬಳಂತಿಮೊಗರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ನಿರ್ಮಾಣ ಸಮಿತಿ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಗರಡಿ ಕ್ಷೇತ್ರ ಆಡಳಿತ ಮೊಕ್ತೇಸರ ಕಾಂತಪ್ಪ ಬಂಗೇರ ಬಳಂತಿಮೊಗರು, ಪುಣಚ ಕೋಟಿ ಚೆನ್ನಯ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಪೂಜಾರಿ ಕೋಡಂದೂರು, ಊರಿನ ಗಣ್ಯರಾದ ರಾಮಕೃಷ್ಣ ಬಿ. ಮೂಡಂಬೈಲು, ಜಯರಾಮ ರೈ ಮೂಡಂಬೈಲು, ಶಿವರಾಮ ನಾಯ್ಕ ಪಾವೊಲುಮೂಲೆ, ಶ್ರೀಧರ ಬಳಂತಿಮೊಗರು, ರವಿ ಕುಕ್ಕಾಜೆ, ಸುಂದರ ಬೇಳ ಕುಂಬಳೆ, ರವಿಚಂದ್ರ ಬಿ, ಸುರೇಶ್ ಪೂಜಾರಿ ಸರವು, ಆನಂದ ಪೂಜಾರಿ ಸರವು, ತಿಮ್ಮಪ್ಪ ಪೂಜಾರಿ ಬಳಂತಿಮೊಗರು, ಬಾಲಕೃಷ್ಣ ಮಯ್ಯಾಳ, ರಮೇಶ್ ಆಚಾರಿ ಇನ್ನಿತರ ದೈವ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *