Breaking
22 Mar 2026, Sun

ರೋಟರಿ ಕ್ಲಬ್ ಲೋರೆಟ್ಟೊ ಹಿಲ್ಸ್ ನಲ್ಲಿ “ಕೃಷ್ಣಪ್ರಕಾಶಾಭಿನಂದನ” ಸನ್ಮಾನ ಕಾರ್ಯಕ್ರಮ

ಬಂಟ್ವಾಳ:ತಾಲೂಕಿನಲ್ಲಿ ಲೋರೆಟ್ಟೊ ಪದವಿನಲ್ಲಿರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ಹಾಗು ಎಂಟು ಕ್ಲಬ್ ಗಳ ಜಂಟಿ ಸಭೆಯು ದಿನಾಂಕ 12/03/2025 ನೇ ಬುಧವಾರ ಸಂಜೆ 7.30 ಕ್ಕೆ ರೋಟರಿ ಸಭಾವವನದಲ್ಲಿ ಜರಗಿತ್ತು.

ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ರೋಟರಿಯಲ್ಲಿ ಅತ್ಯಂತ ಗೌರವಾನ್ವಿತ ಹುದ್ದೆಯನ್ನು ಅಲಂಕರಿಸಿದಂತಹ ರೋಟರಿ ಜಿಲ್ಲೆ 3181ನ ಮಾಜಿ PDG Rtn, ಪ್ರಕಾಶ್ ಕಾರಂತ್ ರವರು ಪ್ರಸ್ತುತ Assistant Rotary Public Image Coordinator (ARPIC) ಹುದ್ದೆಯನ್ನು ಅಲಂಕರಿಸಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರು ಮಾತನಾಡಿ ರೋಟರಿ ಬಗ್ಗೆ ಸಾರ್ವಜನಿಕರ ಸದಾ ಅಭಿಪ್ರಾಯವೂ ರೋಟರಿ ಸಾರ್ವಜನಿಕ ಸೇವೆಯಲ್ಲಿ ಅಡಗಿದೆ ಎಂದು ಹೇಳಿದರು.

ರೋಟರಿ ಜಿಲ್ಲೆ 3181ನ ಮಾಜಿ PDG Rtn, ಕೃಷ್ಣಶೆಟ್ಟಿಯವರು ಪ್ರಸ್ತುತ Assistant Rotary foundation Coordinator (ARFC)ಹುದ್ದೆಯನ್ನು ಅಲಂಕರಿಸಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರು ಮಾತನಾಡಿ ರೋಟರಿ ಫೌಂಡೇಶನ್ ಗೆ ನೀಡುವ ದಾನದಿಂದ ದೊಡ್ಡ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ರೋಟರಿ ಜಿಲ್ಲೆ 3182 ನ ಮಾಜಿ PDG Rtn, ಅಭಿನಂದನ್ ಶೆಟ್ಟಿಯವರು ಪ್ರಸ್ತುತ Rotary Coordinator for Public Image,(RCPI)ಹುದ್ದೆಯನ್ನು ಅಲಂಕರಿಸಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರು ಮಾತನಾಡಿ Rtn PDG ಕೃಷ್ಣಶೆಟ್ಟಿ ಹಾಗೂ Rtn PDG ಪ್ರಕಾಶ್ ಕಾರಂತ್ ರವರು ಈ ಹಿಂದೆ ಅವರಿಗೆ ಸಂಬಂದಿಸಿದ ಹುದ್ದೆಗಳಲ್ಲಿ ಮಾಡಿದ ಸತ್ಕಾರ್ಯದಿಂದ ಅವರಿಗೆ ಈ ಹುದ್ದೆಗಳು ಒಲಿದು ಬಂದಿದೆ ಎಂದು ಹೇಳಿದರು, ರೋಟರಿ ಸದಸ್ಯರು ಸಮಾಜದಲ್ಲಿ ಮಾಡುವಂತಹ ಉತ್ತಮ ಕೆಲಸಗಳು ರೋಟರಿ ಸಂಸ್ಥೆಗೆ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಬಂಟ್ವಾಳದ ಅಧ್ಯಕ್ಷರಾದ Rtn. ಬೇಬಿ ಕುಂದರ್, ರೋಟರಿ ಕ್ಲಬ್ ಮೋಡಂಕಪು ಮಾಜಿ ಅಧ್ಯಕ್ಷರಾದ Rtn.ಎಲಿಯಾಸ್ ಸಾಂಕ್ಟಿಸ್ಟ್, ರೋಟರಿ ಕ್ಲಬ್ ಬಿ. ಸಿ. ರೋಡ್ ಸಿಟಿಯ ಸ್ಥಾಪಕಾಧ್ಯಕ್ಷರು ಸತೀಶ್ ಕುಮಾರ್, ರೋಟರಿ ಕ್ಲಬ್ ಮೋಡಂತ್ಯಾರ್ ನ ಸ್ಥಾಪಕಾಧ್ಯಕ್ಷರು Rtn. ಮೋನಪ್ಪ ಪೂಜಾರಿ ಕಂಡೆತ್ಯರ್, ರೋಟರಿ ಕ್ಲಬ್ ಸಿದ್ದಕಟ್ಟೆ ಯ ಅಧ್ಯಕ್ಷರಾದ Rtn. ಶಿವಯ್ಯ SL, ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷರಾದ Rtn. ಕಿಶೋರ್ ಕುಮಾರ್ ರೋಟರಿ ಕ್ಲಬ್ ಫರಂಗಿಪೇಟೆ ಯ ಅಧ್ಯಕ್ಷರಾದ Rtn.ಅರ್ಜುನ್ ಪೂಂಜಾ,ರೋಟರಿ ಕ್ಲಬ್ ಲೋರೆಟೊ ಹಿಲ್ಸ್ ನ ಸ್ಥಾಪಕಾಧ್ಯಕ್ಷರಾದ ಅವಿಲ್ ಮ್ಯಾನೇಜಸ್ ಹಾಗೂ ಈ ಎಲ್ಲಾ ಕ್ಲಬಿನ ಕಾರ್ಯದರ್ಶಿ ,ಪದಾಧಿಕಾರಿಗಳು, ಸದಸ್ಯರು, ಜಿಲ್ಲೆಯ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದರು.

ರೋಟರಿ ಕ್ಲಬ್ ಲೋರೆಟೊ ಹಿಲ್ಸ್ ನ ಅಧ್ಯಕ್ಷರಾದ Rtn. ಸುರೇಶ್ ಶೆಟ್ಟಿ ಯವರು ಸ್ವಾಗತಿಸಿದರು, ಕಾರ್ಯದರ್ಶಿ ರಾಜೇಶ್ ಶೆಟ್ಟಿ ಯವರು ವಂದಿಸಿದರು,ಹಾಗೂ ರಾಘವೇಂದ್ರ ಭಟ್, ವಿಜಯ ಫೆರ್ನಾಂಡಿಸ್, ರಾಯಿ ರಮೇಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದ ಪ್ರಯೋಜಕರಾದ ಲೋರೆಟೊ ಹಿಲ್ಸ್ ಕ್ಲಬ್ ನ ಮಾಜಿ ಸಹಾಯಕ ಗವರ್ನರ್ Rtn. ರಾಘವೇಂದ್ರ ಭಟ್, ಪದಾಧಿಕಾರಿಗಳಾದ Rtn. ಹರಿಪ್ರಸಾದ್ ಶೆಟ್ಟಿ Rtn. ಕಿರಣ್ ಮಂಜಿಲ, Rtn ಅವಿಲ್ ಮ್ಯಾನೇಜಸ್,Rtn ಶೃತಿ ಮಾಡ್ತಾ, ಹಾಗೂ ಮೋಡಂತ್ಯಾರ್ ಕ್ಲಬ್ ನ Rtn.ಎಲಿಯಾಸ್ ಸಾಂಕ್ಟಿಸ್ಟ್,ರವರನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *