Breaking
6 May 2026, Wed

ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಡಿಜಿಟಲ್ ಮೀಡಿಯಾ ಕಾರ್ಯಗಾರ ಮತ್ತು ಸಾಧಕ ಗಣ್ಯರಿಗೆ ಪ್ರಶಸ್ತಿ ಪ್ರಧಾನ

ಮೈಸೂರು: ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಡಿಜಿಟಲ್ ಮೀಡಿಯಾ ಕಾರ್ಯಗಾರ ಮತ್ತು ಸಾಧಕ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 6.2 20 25 ರಂದು ಮೈಸೂರಿನ ರಾಮಕೃಷ್ಣನಗರದಲ್ಲಿರುವ ರಮಗೋವಿಂದು ರಂಗಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಸಂಘಗಳಿಗೆ ಡಿಜಿಟಲ್ ಮೀಡಿಯಾ ಮಹತ್ವ ವಿಚಾರದ ಬಗ್ಗೆ ಗಣ್ಯರಿಂದ ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಯಿತು ಮತ್ತು ಮೈಸೂರಿನ ಸಾಧಕ ಗಣ್ಯರಿಗೆ ಪ್ರಶಸ್ತಿ ಮೈಸೂರಿನ ಸ್ವಯಂಸೇವಾ ಸಂಘಗಳಿಗೆ ಡಿಜಿಟಲ್ ಮೀಡಿಯಾ ಮಹತ್ವ ವಿಚಾರದ ಬಗ್ಗೆ ಅರಿವು ಮೂಡಿಸಲಾಯಿತು.

ಇದೇ ಸಂಧರ್ಭದಲ್ಲಿ ಭಾರತ ವಿಶ್ವಕಪ್ ವಿಜೇತ ಕೋಕೋ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೈಸೂರಿನ ಕುಮಾರಿ ಚೈತ್ರ ರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು ಮತ್ತು ಮೈಸೂರಿನ ವಿವಿಧ ಭಾಗಗಳಲ್ಲಿ ವಿವಿಧ ರಂಗಗಳ ಸಾಧಕರಿಗೆ ಪ್ರಶಸ್ತಿ ನೀಡಿ ಉರಿದುಂಬಿಸಲಾಯಿತು.

ಈ ಕಾರ್ಯಕ್ರದಲ್ಲಿ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷರಾದ ಸಿ ಬಸವರಾಜ್ ನಿರ್ದೇಶಕರಾದ ರಕ್ತದಾನಿ ಮಂಜು, ಮಂಜುನಾಥ್ ಮತ್ತು ಅನೀಫ್ ರವರು ಪಾಲ್ಗೊಂಡಿದ್ದರು ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *