ಉಡುಪಿ: ಶ್ರೀ ದುರ್ಗಾ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರ್ ಪುರ ಉಡುಪಿ ಜಿಲ್ಲೆ, ಇದರ ವಾರ್ಷಿಕೋತ್ಸವ ಸಮಾರಂಭವು ಶಂಕರ್ ಪುರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ಹರೀಶ್ ಕುಲಾಲ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಸೈಂಟ್ ಜಾನ್ ಚರ್ಚ್ ಶಂಕರಪುರ ಇದರ ಪ್ರಧಾನ ಧರ್ಮ ಗುರುಗಳಾದ ರೆ” ಫಾ” ಪ್ರಕಾಶ್ ಅನಿಲ್ ಕಸ್ತಲಿನೊ, ಅತಿಥಿ ಚಂದ್ರಹಾಸ ಗುರುಸ್ವಾಮಿ, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಕುರುಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಆನಂದ ಪೂಜಾರಿ,ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ರಾವ್ . ಹಾಗೂ ಎಲ್ಲಾ ಸದಸ್ಯರ ದಿವ್ಯ ಹಸ್ತದಿಂದ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದ ಸಂಜೀವ ಕುಲಾಲ್. ಅಶ್ವಿನ್ ಸನಿಲ್. ಜೋಸೆಫ್ ಲೋಬೊ ಶಂಕರಪುರ. ಆಂಟನಿ ಡೇಸ. ಜಯಾನಂದ್ ಶೆಟ್ಟಿ ಯವರನ್ನು ಶಾಸಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ನಂತರ ಕಾರ್ಯಕ್ರಮದಲ್ಲಿ “ಕಥೆ ಎಡ್ಡೆoಡು “ತುಳು ನಾಟಕವನ್ನು ಪ್ರದರ್ಶಿಸಲಾಯಿತು. ಟೆಂಪೋ ಚಾಲಕ ಮತ್ತು ಮಾಲಕರ ವಾರ್ಷಿಕೋತ್ಸವವು ಜನಸಂದಣಿ ತುಂಬಿ ತುಳುಕುತ್ತಿತ್ತು.




