Breaking
22 Sep 2026, Tue

ಸಮಗ್ರ ಅಭಿವೃದ್ಧಿಯೊಂದಿಗೆ ಭಾರತವು ವಿಶ್ವಕ್ಕೆ ಮಾದರಿಯಾಗಿಸುವ ದಿಕ್ಸುಚಿ ಕೇಂದ್ರ ಬಜೆಟ್ :ಪ್ರಭಾಕರ ಪ್ರಭು

Prabhu

ಸಿದ್ದಕ್ಕಟ್ಟೆ: ಇಡೀ ದೇಶವೇ ನಿರೀಕ್ಷಿಸುತಿದ್ದ ಕೇಂದ್ರ ಬಜೆಟ್ -2025 ಇಂದು ಮಂಡನೆಯಾಗಿದ್ದು, ಇದು ಭಾರತವು ವಿಶ್ವಕ್ಕೆ ಮಾದರಿಯಾಗಿಸುವ ದಿಕ್ಸುಚಿ ಕೇಂದ್ರ ಬಜೆಟ್ ಎಂದು ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ನಿ. ಅಧ್ಯಕ್ಷ ಪ್ರಭಾಕರ ಪ್ರಭು ಶ್ಲಾಘಿಸಿದರು.

ರೈತರಿಗೆ ಶೂನ್ಯ ಬಡ್ಡಿಯಲ್ಲಿ ಬೆಳೆ ಸಾಲ 5 ಲಕ್ಷಕ್ಕೆ ಹೆಚ್ಚಳ, ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆ ಜಾರಿ, ಗ್ರಾಮೀಣಾಭಿವೃದ್ಧಿ, ನಗರ ಪ್ರದೇಶ ಮೂಲ ಸೌಕರ್ಯ, ರೈಲ್ವೆ ಇಲಾಖೆಗಳ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರ ದ ಸಂಶೋಧನೆಗೆ ಗರಿಷ್ಠ ಅನುದಾನ.

10 ಸಾವಿರ ವೈದ್ಯಕೀಯ ಸೀಟು ಹೆಚ್ಚಳ,ಹೊಸ ಹೊಸ ಕಂಪೆನಿಗಳ ಸ್ಥಾಪನೆಗೆ 10 ಸಾವಿರ ಕೋಟಿ ನಿಧಿ ನಿಗದಿ,ದೇಶದ ನಾನಾ ಕಡೆಯಲ್ಲಿ 120 ಹೊಸ ವಿಮಾನ ನಿಲ್ದಾಣ ನಿರ್ಮಾಣ, ಕ್ಯಾನ್ಸರ್ ಔಷಧಿ,ಇನ್ನಿತರ ಔಷಧಿ, ಎಲೆಕ್ಟ್ರಿಕ್ ಕಾರು, ದೇಶಿಯ ಬಟ್ಟೆ, ಚರ್ಮದ ವಸ್ತು,ಹಡಗು,ಮೊಬೈಲ್ ತಯಾರಿಕೆ ವಸ್ತುಗಳ ಮೇಲೆ ಸಹಿತ ಹಲವಾರು ವಸ್ತುಗಳ ಮೇಲೆ ತೆರಿಗೆ ವಿನಾಯಿತಿ,ಒಟ್ಟಿನಲ್ಲಿ ಹೊಸ ಯೋಜನೆ,ಹೊಸ ಯೋಚನೆ ಗಳಿಂದ ಕೂಡಿದ ಕೇಂದ್ರ ಬಜೆಟ್ ವಿಶ್ವ ಗುರು ಭಾರತಕ್ಕೆ ಪೂರಕವಾಗಿದೆ ಎಂದರು.

Leave a Reply

Your email address will not be published. Required fields are marked *