Breaking
1 Sep 2026, Tue

ದಕ್ಷಿಣ ಕನ್ನಡದಲ್ಲಿ ಆಟೋ ಪ್ರಯಾಣ ದರ ಪರಿಷ್ಕರಣೆ; ಕನಿಷ್ಠ ದರ 40 ರೂ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಮೊದಲ 1.5 ಕಿ.ಮೀ. ಪ್ರಯಾಣಕ್ಕೆ ಕನಿಷ್ಠ 40 ರೂ. ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ಗರಿಷ್ಠ ಮೂವರು ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.


ಮೊದಲ 1.5 ಕಿ.ಮೀ. ನಂತರದ ಪ್ರತಿ ಕಿ.ಮೀ.ಗೆ 20 ರೂ. ದರ ವಿಧಿಸಲಾಗುತ್ತದೆ. ಈ ದರವೂ ಗರಿಷ್ಠ ಮೂವರು ಪ್ರಯಾಣಿಕರಿಗೆ ಅನ್ವಯವಾಗಲಿದೆ.
ಆಟೋ ರಿಕ್ಷಾ ಮೊದಲ 10 ನಿಮಿಷಗಳ ಕಾಲ ಕಾಯುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಬಳಿಕ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 5 ರೂ. ಕಾಯುವಿಕೆ ಶುಲ್ಕ ವಿಧಿಸಬಹುದಾಗಿದೆ.


ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮಾತ್ರ ಸಾಮಾನ್ಯ ದರದ ಒಂದೂವರೆ ಪಟ್ಟು ಶುಲ್ಕ ಪಡೆಯಲು ಅವಕಾಶ ನೀಡಲಾಗಿದೆ.
ಪರಿಷ್ಕೃತ ದರವನ್ನು ಆಟೋ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುವಂತಿಲ್ಲ.

Leave a Reply

Your email address will not be published. Required fields are marked *