ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಅಕ್ಟೋಬರ್ 15ರಂದು ಧ್ವನಿವರ್ಧಕ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮುಗೆರೋಡಿ, ಉಪಾಧ್ಯಕ್ಷ ಉಮೇಶ್ ಗೌಡ ಖಂಡಿಗ, ಕಾರ್ಯದರ್ಶಿ ಸತೀಶ್, ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ನಿರ್ದೇಶಕರಾದ ರಮಾನಂದ ಪೂಜಾರಿ, ಸುನಿಲ್, ಹರೀಶ್ ಗೌಡ, ಶಾರದಾ ಮುಚ್ಚೂರು, ಸದಾಶಿವ ಶೆಟ್ಟಿ ಹಾಗೂ ಪ್ರತಿಮಾ ಉಪಸ್ಥಿತರಿದ್ದರು.

ಮೊಗ್ರು ಡೈರಿಯ ಕಾರ್ಯದರ್ಶಿ ಶಶಿಕಲಾ, ಪಿಲಿಗೂಡು ಡೈರಿಯ ಕಾರ್ಯದರ್ಶಿ ಭಾರತಿ, ಡಾ. ನಿತಿನ್, ಪಾಲನಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







