Breaking
1 Sep 2026, Tue

ಬೆಳ್ತಂಗಡಿ: 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳದಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ

.
ಮೃತ ಬಾಲಕನನ್ನು ಕುರಿಯಾಳ ನಿವಾಸಿ ಭರತ್ ಗೌಡ ಅವರ ಪುತ್ರ, 14 ವರ್ಷದ ಶ್ರವಣ್ ಬಿ.ಕೆ. ಎಂದು ಗುರುತಿಸಲಾಗಿದೆ.


ಮಾಹಿತಿಯಂತೆ, ಆ.29ರಂದು ಸಂಜೆ ಮನೆಯಲ್ಲಿಯೇ ಶ್ರವಣ್ನ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಆದರೆ ಮರುದಿನ ಬೆಳಗ್ಗೆ ಆತ ಮನೆಯ ಮೇಲ್ಚಾವಣಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.


ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *