ಕಣಿಯೂರು: ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಪದ್ಮುಂಜ ಅನ್ನಪೂರ್ಣೇಶ್ವರಿ ಜನರಲ್ ಸ್ಟೋರ್ ವತಿಯಿಂದ ಬಕೆಟ್ ಹಾಗೂ ಇನ್ನಿತರ ನಿತ್ಯೋಪಯೋಗಿ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಅನ್ನಪೂರ್ಣೇಶ್ವರಿ ಜನರಲ್ ಸ್ಟೋರ್‌ನ ಮಾಲಕರಾದ ಗೋಪಾಲ ಗೌಡ ಅವರು ವಸ್ತುಗಳನ್ನು ಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಾಲನಾ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





