Breaking
13 Oct 2026, Tue

ಅರಣ್ಯ ನಾಶದಿಂದಾಗಿ ಕಾಡಿನ ಪ್ರಾಣಿ ಪಕ್ಷಿಗಳು ಆಹಾರ ಹುಡುಕುತ್ತಾ ನಾಡಿಗೆ ಬರುವುದನ್ನು ತಪ್ಪಿಸುವ ಹೆಗ್ಗಡೆಯವರ ದೂರ ದೃಷ್ಟಿಯ ಯೋಜನೆಯವೇ ಸಾಮಾಜಿಕ ಅರಣೀಕರಣ ಯೋಜನೆ: ಬಾಬು ನಾಯ್ಕ್

ವಿಟ್ಲ: ಅರಣ್ಯ ನಾಶದಿಂದಾಗಿ ಕಾಡಿನ ಪ್ರಾಣಿ–ಪಕ್ಷಿಗಳು ಆಹಾರ ಅರಸುತ್ತಾ ನಾಡಿಗೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಯೋಜನೆಯಾಗಿ ಸಾಮಾಜಿಕ ಅರಣೀಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಹೇಳಿದರು.


ಆಗಸ್ಟ್ 25ರಂದು ಕಲ್ಲಂಗಲ ಕೇಪು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಅರಣೀಕರಣ ಕಾರ್ಯಕ್ರಮದ ಅಂಗವಾಗಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸುಮಾರು 330 ಫಲವೃಕ್ಷಗಳ ಗಿಡಗಳನ್ನು ನಾಟಿ ಮಾಡಲಾಯಿತು.


ಕಾರ್ಯಕ್ರಮದಲ್ಲಿ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ, ಜನಜಾಗೃತಿ ವೇದಿಕೆ ಅಳಿಕೆ ವಲಯ ಅಧ್ಯಕ್ಷ ಬಾಲಕೃಷ್ಣ ಕಾರಂತ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಳಿಕೆ ವಲಯ ಅಧ್ಯಕ್ಷ ರಾಜೇಂದ್ರ ರೈ, ವಲಯ ಅರಣ್ಯಾಧಿಕಾರಿ ವೀರಣ್ಣ ಗೌಡ, ಕಲ್ಲಂಗಲ ಸರ್ಕಾರಿ ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮಾಜಿ ಅಧ್ಯಕ್ಷೆ ಗಿರಿಜಾ ಎನ್., ಮುಖ್ಯ ಶಿಕ್ಷಕಿ ಮಾಲತಿ ಕೆ., ಹಿರಿಯ ಶಿಕ್ಷಕ ಲಕ್ಷ್ಮಣ ಟಿ. ನಾಯ್ಕ, ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಐತಪ್ಪ ಪೂಜಾರಿ, ಶೌರ್ಯ ಘಟಕದ ತಾಲೂಕು ಕ್ಯಾಪ್ಟನ್ ಗಣೇಶ್, ತಾಲೂಕು ಮಾಸ್ಟರ್ ಗಿರೀಶ್, ಅಳಿಕೆ ವಲಯ ಮೇಲ್ವಿಚಾರಕಿ ಮೀನಾಕ್ಷಿ ಸೇರಿದಂತೆ ಒಕ್ಕೂಟ ಸೇವಾ ಪ್ರತಿನಿಧಿಗಳಾದ ಸರಸ್ವತಿ, ಗಾಯತ್ರಿ, ಜ್ಯೋತಿ ಹಾಗೂ ವಿಟ್ಲ ಯೋಜನಾ ಕಚೇರಿಯ ಎಂಟು ವಲಯಗಳ ಸುಮಾರು 65 ಶೌರ್ಯ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *