Breaking
22 Aug 2026, Sat

ಮೂಡುಬಿದಿರೆ: ಪಿಕಪ್ ವಾಹನ ಪಲ್ಟಿ; ಕೆಲಕಾಲ ಟ್ರಾಫಿಕ್ ಜಾಮ್

ಮೂಡುಬಿದಿರೆ: ಕೊಡ್ಯಡ್ಕದ ಮಿತ್ತಬೈಲು ಬಳಿ ಜನರೇಟರ್ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಾರ್ಗಮಧ್ಯದಲ್ಲೇ ಪಲ್ಟಿಯಾದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿ ಟ್ರಾಫಿಕ್ ಜಾಮ್ ಸಂಭವಿಸಿದ ಘಟನೆ ಶನಿವಾರ (ಆ.22) ಬೆಳಗ್ಗೆ ನಡೆದಿದೆ.

ಪಾಲಡ್ಕ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಪಿಕಪ್ ವಾಹನವು ಕೊಡ್ಯಡ್ಕ ಮಿತ್ತಬೈಲು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದಲ್ಲೇ ಪಲ್ಟಿಯಾಗಿದೆ.

ವಾಹನ ಮಾರ್ಗಮಧ್ಯದಲ್ಲೇ ಪಲ್ಟಿಯಾಗಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳಕ್ಕೆ ಪೊಲೀಸರು ಸೇರಿದಂತೆ ಸಂಬಂಧಪಟ್ಟವರು ಆಗಮಿಸಿ ಪಲ್ಟಿಯಾಗಿದ್ದ ವಾಹನವನ್ನು ತೆರವುಗೊಳಿಸಿದರು. ಬಳಿಕ ಸಂಚಾರವನ್ನು ಸುಗಮಗೊಳಿಸಲಾಯಿತು.

Leave a Reply

Your email address will not be published. Required fields are marked *