Breaking
10 Oct 2026, Sat

ಹರೀಶ್ ಪೂಂಜ ಹುಟ್ಟುಹಬ್ಬ: ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಸಂಕಲ್ಪದೊಂದಿಗೆ ವಿಶೇಷ ಪೂಜೆ

ಗುರುವಾಯನಕೆರೆ: ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ, ಗುರುವಾಯನಕೆರೆ ವತಿಯಿಂದ ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬದ ಪ್ರಯುಕ್ತ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಬಾರಿ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಕುವೆಟ್ಟು ಗ್ರಾಮದ ಬರಾಯ ನಿವಾಸಿ ಬಡ ಕುಟುಂಬದ ಕಮಲ ಅವರಿಗೆ ಶಾಸಕರ ಸಹಕಾರದೊಂದಿಗೆ, ಸಾಯಿರಾಮ್ ಫ್ರೆಂಡ್ಸ್ ಹಾಗೂ ದಾನಿಗಳ ನೆರವಿನಿಂದ ನೂತನ ಮನೆ ನಿರ್ಮಿಸಿಕೊಡುವ ಸಂಕಲ್ಪದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ಅಧ್ಯಕ್ಷ ಪ್ರದೀಪ್ ಶೆಟ್ಟಿ ಶಕ್ತಿನಗರ, ದೇವಿಪ್ರಸಾದ್ ಆಚಾರ್ಯ ಶಕ್ತಿನಗರ, ವಿತೇಶ್ ಪಾಡ್ಯರ್, ಪ್ರದೀಪ್ ಶೆಟ್ಟಿ ನವಶಕ್ತಿ, ನಿಮಿತ್ ಪೂಜಾರಿ ಪಾಡ್ಯರ್, ಪವನ್ ಬಂಗೇರ ಬರಾಯ, ರಮೇಶ್ ಬರಾಯ ಸೇರಿದಂತೆ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ತಂಡದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *