Breaking
10 Oct 2026, Sat

ಬೃಂದಾವನ ಆಶ್ರಮಕ್ಕೆ ದಿನಸಿ ಕೊಡುಗೆ ನೀಡಿದ ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್

ಮೈಸೂರು: PGRSS ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಆಶ್ರಮದಲ್ಲಿರುವ ತಾಯಂದಿರ ಸೇವಾರ್ಥ ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್ ವತಿಯಿಂದ ದಿನಸಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್‌ನ ನಿರ್ದೇಶಕ ಲಯನ್ ಅನಿಲ್ ಅವರು ದಿನಸಿ ಪದಾರ್ಥಗಳನ್ನು ಹಸ್ತಾಂತರಿಸಿ ಆಶ್ರಮದ ನಿವಾಸಿಗಳಿಗೆ ನೆರವಾದರು.

ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಮೇಟಿ ಹನುಮಂತಪ್ಪ, ಕಾರ್ಯದರ್ಶಿ ಲಯನ್ ಸುರೇಶ್, ಮಾಜಿ ಅಧ್ಯಕ್ಷ ಲಯನ್ ಚಂದ್ರಶೇಖರ್, ಲಯನ್ ರಕ್ತದಾನಿ ಮಂಜು ಹಾಗೂ ಆಶ್ರಮದ ತಾಯಂದಿರು ಉಪಸ್ಥಿತರಿದ್ದರು.

ನಿರ್ಗತಿಕರು ಮತ್ತು ವೃದ್ಧರ ಸೇವೆಗೆ ಕೈಜೋಡಿಸಿದ ಲಯನ್ ಅನಿಲ್ ಅವರಿಗೆ ಆಶ್ರಮದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *