ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಅ.18 ಮತ್ತು 19ರಂದು ನಡೆಯಲಿರುವ ಶ್ರೀ ಶಾರದಾ ಪೂಜಾ ದಶಮಾನೋತ್ಸವದ ಅಂಗವಾಗಿ ಅ.11ರಂದು ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ‘ದಸರಾ ಕ್ರೀಡೋತ್ಸವ’ ಹಾಗೂ ‘ದಶಾರದ ಸಾಂಸ್ಕೃತಿಕ ಸಂಭ್ರಮ’ ನಡೆಯಲಿದೆ.

ಬೆಳಗ್ಗೆ 9.30ರಿಂದ ಬಂಟ್ವಾಳ ತಾಲೂಕು ಮಟ್ಟದ ವಿದ್ಯಾರ್ಥಿಗಳು ಹಾಗೂ ಮುಕ್ತ ವಿಭಾಗದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸಂಜೆ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ದಶಾರದ ಪುರಸ್ಕಾರ’ ಪ್ರದಾನ, ಶಿಕ್ಷಕ ವೃಂದಕ್ಕೆ ಗುರುವಂದನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಮತ್ತು ವೈದಿಕ ಸೇವೆಗಾಗಿ ವೇದಮೂರ್ತಿ ಬ್ರಹ್ಮ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ನಡ್ವಂತಾಡಿ, ಉದ್ಯಮ ಮತ್ತು ಸಾಮಾಜಿಕ ಸೇವೆಗಾಗಿ ಅಬ್ದುಲ್ ನಝೀರ್ ಸಾಹೇಬ್ ಇರ್ವತ್ತೂರು, ಕೃಷಿ ಮತ್ತು ಸಾಮಾಜಿಕ ಸೇವೆಗಾಗಿ ಡೇನಿಸ್ ಫೆರ್ನಾಂಡೀಸ್ ದೇರೊಟ್ಟು, ನಿವೃತ್ತ ಯೋಧ ಹಾಗೂ ಸಾಮಾಜಿಕ ಸೇವೆಗಾಗಿ ವೆಂಕಪ್ಪ ಮೂಲ್ಯ ಬಂಗೇರಕೆರೆ, ದೈವಾರಾಧನೆ ಮತ್ತು ಧಾರ್ಮಿಕ ಸೇವೆಗಾಗಿ ದೇಜಪ್ಪ ಬಾಚಕೆರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಗಾಗಿ ಆಲದಪದವು ಗೋಪಾಲ ಅಂಚನ್, ಕಲೆ ಮತ್ತು ಮಾಧ್ಯಮ ಸೇವೆಗಾಗಿ ರತ್ನದೇವ್ ಪುಂಜಾಲಕಟ್ಟೆ, ಚಿತ್ರಕಲೆ ಮತ್ತು ರಂಗಭೂಮಿ ಸೇವೆಗಾಗಿ ಮುರಲಿಕೃಷ್ಣ ರಾವ್, ‘ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್’ ಸಾಧಕಿ ವಿಷ್ಣುಪ್ರಿಯಾ ಪೈ ಹಾಗೂ ಭರತನಾಟ್ಯ ಮತ್ತು ಕರಾಟೆ ಕ್ಷೇತ್ರದ ಸಾಧಕಿ ಸಹನಾ ಎಂ. ಶೆಟ್ಟಿ ನರ್ವಲ್ದಡ್ಡ, ಅವರಿಗೆ ‘ದಶಾರದ ಪುರಸ್ಕಾರ’ ಪ್ರದಾನ ಮಾಡಲಾಗುತ್ತದೆ.

ಇದೇ ವೇಳೆ ಗ್ರಾಮೀಣಾಭಿವೃದ್ಧಿ ಸೇವೆಗಾಗಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇರ್ವತ್ತೂರು ಘಟ ಸಮಿತಿ ಹಾಗೂ ಆರೋಗ್ಯ ಮತ್ತು ಕ್ರೀಡಾ ಸೇವೆಗಾಗಿ ಕೆ.ಕೆ.ಆರ್. ಸ್ಪೋರ್ಟ್ಸ್ ಕ್ಲಬ್ ಮತ್ತು ಹೆಲ್ತ್ ಲೈನ್ ಇರ್ವತ್ತೂರು ಕಲಾಬಾಗಿಲು ಸಂಸ್ಥೆಗೂ ಪುರಸ್ಕಾರ ನೀಡಲಾಗುತ್ತದೆ.
ಕಾರ್ಯಕ್ರಮದ ಕುರಿತು ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್., ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು ಹಾಗೂ ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


