ಬಿ.ಸಿ.ರೋಡ್: ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ವತಿಯಿಂದ 121ನೇ ಸೇವಾ ಕಾರ್ಯದ ಅಂಗವಾಗಿ ಇಬ್ಬರು ಅಶಕ್ತರ ಚಿಕಿತ್ಸೆಗೆ ಒಟ್ಟು ₹90 ಸಾವಿರ ಆರ್ಥಿಕ ನೆರವು ನೀಡಲಾಯಿತು.

ಕಾಸರಗೋಡು ಜಿಲ್ಲೆಯ ಬಂದ್ಯೋಡು ಅಡ್ಕ ನಿವಾಸಿ ಗೌತಮಿ ಗಣೇಶ್ ಪೂಜಾರಿ ದಂಪತಿಯ 11 ವರ್ಷದ ಪುತ್ರಿ ಶಾನ್ವಿ ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ₹70 ಸಾವಿರ ನೆರವು ನೀಡಲಾಯಿತು. ಬಂಟ್ವಾಳ ತಾಲೂಕಿನ ಕಾವಳಪಡೂರು ಮಧ್ವ ನಿವಾಸಿ ಲಕ್ಷ್ಮೀ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ವೆಚ್ಚಕ್ಕಾಗಿ ₹20 ಸಾವಿರ ನೆರವು ನೀಡಲಾಯಿತು.

ನೆರವು ಮೊತ್ತವನ್ನು ಬಿ.ಸಿ.ರೋಡ್‌ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.





