Breaking
9 Oct 2026, Fri

ಕೇಂದ್ರ ಸರ್ಕಾರದ ಯೋಜನೆಗಳ ಆಧಾರಿತ ರಂಗೋಲಿ ಸ್ಪರ್ಧೆ

ಉಜಿರೆ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಮಂಡಲ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಉಜಿರೆಯ ಶಾರದಾ ಮಂಟಪದಲ್ಲಿ ಅ.08 ರಂದು ನಡೆಯಿತು.

ಕೇಂದ್ರ ಸರ್ಕಾರದ ಯೋಜನೆಗಳು – ನಿಮ್ಮ ಕಲ್ಪನೆಯ ರಂಗೋಲಿಯಲ್ಲಿ ಎಂಬ ವಿಷಯದಡಿ ಸ್ಪರ್ಧೆ ಆಯೋಜಿಸಲಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಪ್ರಭಾರಿ ವಸಂತಿ ಮಚ್ಚಿನ, ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣಿಮಾ ಜಯಂತ್ ಹಾಗೂ ತುಳಸಿ ಉಮೇಶ್ ಮಾಲಾಡಿ, ಕಾರ್ಯದರ್ಶಿ ಶಶಿಕಲಾ ದೇವಪ್ಪ ಗೌಡ, ಕೋಶಾಧಿಕಾರಿ ಸಂಗೀತ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಮನ್ ಕೀ ಬಾತ್ ಸಂಯೋಜಕ ಸೀತಾರಾಮ್ ಬೆಳಾಲು, ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ, ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವಂತ್ ಗೌಡ ಪುದುವೆಟ್ಟು, ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ, ಉಜಿರೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಷಾ ಕಾರಂತ್, ಮಾಜಿ ಉಪಾಧ್ಯಕ್ಷ ರವಿ ಬರಮೇಲು, ಜಿಲ್ಲಾ ಎಸ್‌ಸಿ ಮೋರ್ಚಾ ಉಪಾಧ್ಯಕ್ಷೆ ಸಿ.ಕೆ. ಚಂದ್ರಕಲಾ ಸೇರಿದಂತೆ ಪ್ರಮುಖರಾದ ದೇವಪ್ಪ ಗೌಡ ಸಾಯಿಕೃಪಾ, ಪ್ರಮೀಳಾ ವಿಶ್ವನಾಥ್, ನಾಗೇಶ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *