Breaking
9 Oct 2026, Fri

ಜೈ ತುಲುನಾಡ್ (ರಿ.) ಬಂಟ್ವಾಳ ಘಟಕದಿಂದ ಉಚಿತ ತುಳು ಲಿಪಿ ಕಾರ್ಯಾಗಾರ

ಬಂಟ್ವಾಳ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರವು ತುಳು ಭಾಷೆಗೆ ಕರ್ನಾಟಕದಲ್ಲಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಜೈ ತುಲುನಾಡ್ (ರಿ.) ಸಂಘಟನೆಯ ಬಂಟ್ವಾಳ ಘಟಕದ ವತಿಯಿಂದ ಉಚಿತ ಆನ್‌ಲೈನ್ ತುಳು ಲಿಪಿ ತರಗತಿಗಳು ಅ.12ರ ಸೋಮವಾರದಿಂದ ಆರಂಭವಾಗಲಿವೆ.

ಪ್ರತಿದಿನ ರಾತ್ರಿ 8ರಿಂದ 9 ಗಂಟೆಯವರೆಗೆ ವಾಟ್ಸಾಪ್ ಗ್ರೂಪ್ ಮೂಲಕ ತರಗತಿಗಳು ನಡೆಯಲಿದ್ದು, ಆಸಕ್ತರು ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜೈ ತುಲುನಾಡ್ (ರಿ.) ಬಂಟ್ವಾಳ ಘಟಕದ ಅಧ್ಯಕ್ಷ ಕಿಶೋರ್ ಪೂಜಾರಿ ಮುಂಡ್ಲಿ ತಿಳಿಸಿದ್ದಾರೆ.

ತುಳು ಭಾಷೆಗೆ ಆಡಳಿತಾತ್ಮಕ ಸ್ಥಾನಮಾನ ದೊರಕಿಸುವ ಪ್ರಯತ್ನಗಳಲ್ಲೂ ಜೈ ತುಲುನಾಡ್ ಸಂಘಟನೆಯ ಸದಸ್ಯರು ಮಹತ್ವದ ಪಾತ್ರ ವಹಿಸಿದ್ದು, ಕಳೆದ ಸುಮಾರು 14 ವರ್ಷಗಳಿಂದ ದಾಖಲೆಗಳ ಸಂಗ್ರಹ, ವಿವಿಧ ಅಭಿಯಾನಗಳು ಹಾಗೂ ಕಾರ್ಯಕ್ರಮಗಳ ಮೂಲಕ ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಮಂಗಳೂರು ಸೇರಿದಂತೆ ಬೆಂಗಳೂರು ಹಾಗೂ ಇತರ ರಾಜ್ಯಗಳಲ್ಲಿಯೂ ಸಂಘಟನೆಯ ಚಟುವಟಿಕೆಗಳು ವಿಸ್ತರಿಸಿದ್ದು, ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿಗಳ ಮೂಲಕ ಈವರೆಗೆ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಸಲಾಗಿದೆ. ಸಂಘಟನೆಯ 120ಕ್ಕೂ ಅಧಿಕ ತುಳು ಲಿಪಿ ಶಿಕ್ಷಕರು ಯಾವುದೇ ಫಲಾಪೇಕ್ಷೆಯಿಲ್ಲದೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

ಬಂಟ್ವಾಳದ ಜನರಿಗೂ ತುಳು ಲಿಪಿ ಕಲಿಯಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು (https://www.jaitulunad.in) ವೆಬ್‌ಸೈಟ್ ಮೂಲಕ ಹೆಸರು ನೋಂದಾಯಿಸಿಕೊಂಡು ಉಚಿತ ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *