ಬಂಟ್ವಾಳ: ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಎನ್. ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಮಸೀದಿಯ ಖತೀಬ್ ಸಯ್ಯದ್ ಬಾಲವಿ ತಂಙಳ್ ಅವರ ದುಆದೊಂದಿಗೆ ಸಭೆ ಆರಂಭಗೊಂಡಿತು.

ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ ಅವರು 2025-26ನೇ ಸಾಲಿನ ಲೆಕ್ಕಪತ್ರ ಮಂಡಿಸಿ, ವಾರ್ಷಿಕ ವರದಿ ವಾಚಿಸಿದರು. ಬಳಿಕ ಮಸೀದಿ ವ್ಯಾಪ್ತಿಯ ಮೊಹಲ್ಲಾದ 19 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಶಾಂತಿಅಂಗಡಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕೆಳಗಿನ ಮಿತ್ತಬೈಲ್ ಹಾಗೂ ಅಬ್ದುಲ್ ಹಮೀದ್ ಕೊಡಂಗೆ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಆಲಿ ಪೊನ್ನೋಡಿ, ಕಾರ್ಯದರ್ಶಿಗಳಾಗಿ ಆದಂ ಪಲ್ಲ ಹಾಗೂ ಎನ್. ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಫಿ ಕೈಕಂಬ ಮತ್ತು ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಅಶ್ರಫ್ ಶಾಂತಿಅಂಗಡಿ ಆಯ್ಕೆಯಾದರು.
ಬಶೀರ್ ಮಜಲ್ ಸ್ವಾಗತಿಸಿದರು. ಅಶ್ರಫ್ ಶಾಂತಿಅಂಗಡಿ ಧನ್ಯವಾದ ಸಲ್ಲಿಸಿದರು.





