Breaking
9 Oct 2026, Fri

ಬೆಳೆ ವಿಮೆ ಅನ್ಯಾಯದ ವಿರುದ್ಧ ಮಂಗಳೂರಿನ ಹಕ್ಕೊತ್ತಾಯ ಸಭೆಯಲ್ಲಿ ಪದ್ಮುಂಜ ರೈತರ ಭಾಗವಹಿಸುವಿಕೆ

ಪದ್ಮುಂಜ: ಕೃಷಿಕರಿಗೆ ಬೆಳೆ ವಿಮೆ ಪಾವತಿಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಮಂಗಳೂರಿನ ಟೌನ್‌ಹಾಲ್‌ನಲ್ಲಿ ಅ.9ರಂದು ನಡೆದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ, ಜನಪ್ರತಿನಿಧಿಗಳು, ಪ್ರಮುಖರು ಹಾಗೂ ಹೆಚ್ಚಿನ ಸಂಖ್ಯೆಯ ಕೃಷಿಕರು ಭಾಗವಹಿಸಿದರು.

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಗೆ ಒಳಪಡುವ ಬಂದಾರು, ಮೊಗ್ರು ಹಾಗೂ ಕಣಿಯೂರು ಗ್ರಾಮದ ರೈತರು ಸಭೆಯಲ್ಲಿ ಪಾಲ್ಗೊಂಡು, ಬೆಳೆ ವಿಮೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ರೈತರಿಗೆ ಆಗಿರುವ ಅನ್ಯಾಯದ ಕುರಿತು ತಮ್ಮ ಹಕ್ಕೊತ್ತಾಯವನ್ನು ಮಂಡಿಸಿದರು.

Leave a Reply

Your email address will not be published. Required fields are marked *