Breaking
19 Sep 2026, Sat

2026ನೇ ಸಾಲಿನ ಮಾಸಿಕ 14ನೇ ಸೇವಾ ಹಸ್ತಾಂತರ

ಬೆಳ್ತಂಗಡಿ: 2026ನೇ ಸಾಲಿನ ಜುಲಾಯಿ ತಿಂಗಳ ಮಾಸಿಕ 14ನೇ ಸೇವಾ ಯೋಜನೆ ಹಸ್ತಾಂತರ ಕಾರ್ಯಕ್ರಮ ದಿನಾಂಕ: 02.08.2026ನೇ ರವಿವಾರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಯಲ್ಲಿ ಹಸ್ತಾಂತರ ಮಾಡಲಾಯಿತು.

ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಕೇದಗೆ ಕೋಡಿ ಮನೆ ಟಿಎಂಬಲ್ಲಿನ ರಾಜೇಶ್ ಇವರು ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮಂಗಳೂರಿನ K.M.C ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆಗಾಗಿ ಮಾಸಿಕ ಸೇವಾ ಯೋಜನೆಯಲ್ಲಿ ರೂ. 10,000/- ಧನ ಸಹಾಯವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಎಲ್ಲಾ ಸೇವಾ ಮಾಣಿಕ್ಯರು ಎಲ್ಲರೂ ಉಪಸ್ಥಿತರಿದ್ದರು. ಈ ಸೇವಾ ಕಾರ್ಯದ ಯಶಸ್ವಿಗೆ ಸಹಕಾರವನ್ನು ನೀಡಿದ ಸರ್ವರಿಗೂ ಕರುನಾಡು ಚಾರಿಟೇಬಲ್ ಟ್ರಸ್ಟ್(ರಿ.) ಕರ್ನಾಟಕ ಆಡಳಿತ ವಿಭಾಗ ದಿಂದ ಕೃತಜ್ಞತೆಯನ್ನು ಸಲ್ಲಿಸಲಾಯಿತು.

Leave a Reply

Your email address will not be published. Required fields are marked *