Breaking
3 Aug 2026, Mon

ಶಂಬುರು ಒಕ್ಕೂಟದ ಪದಗ್ರಹಣ ಸಮಾರಂಭ ಹಾಗೂ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ಪೂಜೆ ಭಕ್ತಿಭಾವದಿಂದ ನೆರವೇರಿತು

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ತಾಲೂಕು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಪಾಣೆಮಂಗಳೂರು ವಲಯದ ಶಂಬುರು ಒಕ್ಕೂಟದ ಪದಗ್ರಹಣ ಸಮಾರಂಭ ಹಾಗೂ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ಪೂಜೆ ಮತ್ತು ಸಿಯಾಳ ಅಭಿಷೇಕ ಕಾರ್ಯಕ್ರಮವು ಆಗಸ್ಟ್ 3ರಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು.

ಒಕ್ಕೂಟದ ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಪ್ಪ ನಾಯ್ಕ್ ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ನಾಲ್ಕೈತಾಯ ಪಂಜುರ್ಲಿ ನೇಮಹೋತ್ಸವ ಸಮಿತಿ, ನರಿಕೊಂಬು ಅಧ್ಯಕ್ಷ ಜಗನ್ನಾಥ್ ಬಂಗೇರ ನಿರ್ಮಲ್ ಉದ್ಘಾಟಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ. ಅವರು ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿಯ ದಾಖಲಾತಿ ಹಾಗೂ ಅಧಿಕಾರ ಹಸ್ತಾಂತರ ನೆರವೇರಿಸಿದರು.

ಸಮಾರಂಭದಲ್ಲಿ ಮೂರ್ತೆದಾರರ ಸಹಕಾರಿ ಸೇವಾ ಸಂಘ (ರಿ.), ನರಿಕೊಂಬು-ಶಂಬುರು ಅಧ್ಯಕ್ಷ ಪುರುಷೋತ್ತಮ ಸಾಲಿಯನ್, ವ್ಯಾಯಾಮ ಶಾಲೆ ಶಂಬುರು ಅಧ್ಯಕ್ಷ ಆನಂದ ಎ., ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಟೀಚರ್, ತಾಲೂಕು ಯೋಜನಾಧಿಕಾರಿ ಜಯನಂದ ಪಿ., ಹೇಮಚಂದ್ರ ಶಂಬುರು, ಉದಯ ಇರಂತಬೆಟ್ಟು, ದಿನೇಶ್ ರಾಹುಲ್ ಮಜಲ್, ಪುರುಷೋತ್ತಮ ಬಂಗೇರ ನಾಟಿ, ಆನಂದ ಸಾಲಿಯನ್, ನರಿಕೊಂಬು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್, ನೂತನ ಒಕ್ಕೂಟದ ಅಧ್ಯಕ್ಷ ವಾಮನ್ ಕುಲಾಲ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪಾಣೆಮಂಗಳೂರು ವಲಯದ ಮೇಲ್ವಿಚಾರಕಿ ಶಿವಲಕ್ಷ್ಮಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಲಕ್ಷ್ಮಿ ಒಕ್ಕೂಟದ ಸಾಧನಾ ವರದಿ ವಾಚಿಸಿದರು. ಸವಿತಾ ವಂದಿಸಿದರು. ಆಂತರಿಕ ಲೆಕ್ಕಪರಿಶೋಧಕರಾದ ಸುಬ್ರಯ್ಯ ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಸಿಯಾಳ ಅಭಿಷೇಕ ಹಾಗೂ ಆಶ್ಲೇಷ ಪೂಜೆಯನ್ನು ನೆರವೇರಿಸಿ, ಎಲ್ಲರಿಗೂ ಧಾರ್ಮಿಕ ಆಶೀರ್ವಾದ ಕೋರಲಾಯಿತು.

Leave a Reply

Your email address will not be published. Required fields are marked *