ಮೊಗ್ರು: ಆಗಸ್ಟ್ 1ರಂದು ಸುರಿದ ಭಾರೀ ಮಳೆಯಿಂದ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಮೊಗ್ರು ಗ್ರಾಮದ ಮುಗೇರಡ್ಕ ವ್ಯಾಪ್ತಿಯ ದಂಬೆತ್ತಿಮಾರು, ಬರಮೇಲು, ಪರಾರಿ, ನೈಮಾರು ಸೇರಿದಂತೆ ಹಲವೆಡೆ ಕೃಷಿ ಭೂಮಿಗೆ ನೆರೆನೀರು ನುಗ್ಗಿದೆ.

ಇದರಿಂದ ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು ಹಾಗೂ ವಿವಿಧ ತರಕಾರಿ ಬೆಳೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ಹಾನಿಯಾಗಿದೆ. ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.





