Breaking
21 Jul 2026, Tue

ಮಾಳ ಘಾಟ್‌ನಲ್ಲಿ ಡೀಸೆಲ್ ಸೋರಿಕೆ; ಸರಣಿ ಅಪಘಾತ, ಕಾರು ಪಲ್ಟಿ

ಕಾರ್ಕಳ: ರಾಷ್ಟ್ರೀಯ ಹೆದ್ದಾರಿ–169ರ ಚಿಕ್ಕಮಗಳೂರು–ಉಡುಪಿ ಗಡಿಭಾಗದ ಮಾಳ ಘಾಟ್‌ನಲ್ಲಿ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮೇಲೆ ಡೀಸೆಲ್ ಸೋರಿಕೆಯಾಗಿ, ಬಳಿಕ ನಡೆದ ಸರಣಿ ಅಪಘಾತದಲ್ಲಿ ಎರಡು ಕಾರುಗಳು ಜಾರಿ ಅವಘಡಕ್ಕೀಡಾದ ಘಟನೆ ಜುಲೈ 20ರ ಸೋಮವಾರ ನಡೆದಿದೆ.

ಡೀಸೆಲ್‌ನಿಂದ ರಸ್ತೆ ಜಾರುವಂತಾಗಿದ್ದ ಕಾರಣ ಹಿಂದಿನಿಂದ ಬಂದ ಎರಡು ಕಾರುಗಳು ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದು ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮೇಲೆ ಮರಳು ಹಾಕಿ ಡೀಸೆಲ್ ತೆರವುಗೊಳಿಸಿ, ಸಂಚಾರವನ್ನು ಸುಗಮಗೊಳಿಸಿದರು.

ನಿರಂತರ ಮಳೆಯಿಂದ ಘಾಟ್ ರಸ್ತೆಗಳು ಜಾರುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಹಾಗೂ ವೇಗ ಮಿತಿಯೊಳಗೆ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *