Breaking
6 Sep 2026, Sun

ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಾರಾಯಣ

ಬಂಟ್ವಾಳ: ಶ್ರೀ ರುದ್ರ ಪಟ್ಟಣ ಸಮಿತಿ ಮಂಟವಾಳದ ವತಿಯಿಂದ ಬೆಳ್ತಂಗಡಿ ತಾಲೂಕಿನ ಮಲ್ಲಿಪಾಡಿಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ-ಚಮಕ, ಗಣಪತಿ ಸೂಕ್ತ, ಗಣಪತಿ ಅಥರ್ವಶೀರ್ಷ, ದುರ್ಗಾ ಸೂಕ್ತ, ವಿಷ್ಣು ಸೂಕ್ತ, ಪುರುಷ ಸೂಕ್ತ, ಭಾಗ್ಯ ಸೂಕ್ತ, ರುದ್ರ ಸೂಕ್ತ, ಸೌರ ಸೂಕ್ತ, ಮನ್ಯು ಸೂಕ್ತ, ಆಘಮರ್ಷಣ ಸೂಕ್ತ, ಪವಮಾನ ಸೂಕ್ತ ಹಾಗೂ ಮಂತ್ರಪುಷ್ಪ ಪಠಣ ಭಕ್ತಿಭಾವದಿಂದ ನೆರವೇರಿತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಅರ್ಚಕ ರತ್ನಾಕರ ನೂರಿತ್ತಾಯ, ಸಂಚಾಲಕ ಎ. ರವಿಶಂಕರ ಮೈಯ್ಯ, ಶಾಂತರಾಮ ರಾವ್ ಎಸ್.ಬಿ., ಎಂ. ಜಯರಾಮ ಮಯ್ಯ, ಎನ್. ರಾಮಚಂದ್ರ ಮಯ್ಯ, ರವಿಶಂಕರ ಕಾರಂತ, ನಾರಾಯಣ ಮೈಯ್ಯ, ಶ್ರೀನಿವಾಸ ಹೊಳ್ಳ, ಅರ್ಬಿ ಕೃಷ್ಣ ಸೋಮಯಾಜಿ, ಎದನೇಶ್ವರ ರಾವ್, ಡಾ. ಸೀತಾರಾಮ ಮೈಯ್ಯ, ಕೆ. ರಾಜಾರಾಮ ಐತಾಳ, ಎಂ. ಪ್ರಶಾಂತ್ ಮಯ್ಯ, ರಾಜೇಶ್ ಹೊಳ್ಳ ಸೇರಿದಂತೆ ಹಲವರು ಭಾಗವಹಿಸಿದರು.

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್, ಪ್ರಮುಖರಾದ ಅಮರನಾಥ, ನಿರಂಜನ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *