Breaking
14 Jul 2025, Mon

ಆಡಳಿತ ಸೌಧದ ಕಚೇರಿಯ ರೇಷನ್ ಕಾರ್ಡ್ ವಿತರಣಾ ಶಾಖೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ದಿಡೀರ್ ಭೇಟಿ

ಬಂಟ್ವಾಳ: ರೇಷನ್ ಕಾರ್ಡ್ ವಿತರಣೆ ನಡೆಯುವ ತಾಲೂಕಿನ ಆಡಳಿತ ಸೌಧದ ಕಚೇರಿಯ ಆಹಾರ ಶಾಖೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ದಿಡೀರ್ ಬೇಟಿ ನೀಡಿ ಅಧಿಕಾರಿಗಳನ್ನು ಕರೆದು ಜನರಿಗೆ ಸರಿಯಾದ ಮಾಹಿತಿ ನೀಡುವಂತೆ ಸೂಚಿಸಿದರು.‌

ಡಿ.30 ರಂದು ಸೋಮವಾರ ಮತ್ತು 31 ಮಂಗಳವಾರ ಎರಡು ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ರೇಷನ್ ಕಾರ್ಡ್ ಪಡೆಯುವುದಕ್ಕೆ ನೂರಾರು ಜನ ಸೇರಿದ್ದು, ಇಡೀ ದಿನ ಇಲಾಖೆಯಲ್ಲಿ ಸರಣಿ ಸಾಲಿನಲ್ಲಿ ನಿಂತು ಸುಸ್ತಾದ ಫಲಾನುಭವಿಗಳು ಶಾಸಕರಿಗೆ ಪೋನ್ ಸಂಪರ್ಕ ಮೂಲಕ ದೂರು ನೀಡಿದ್ದರು. ಹಾಗಾಗಿ ದಿಡೀರ್ ಶಾಸಕರು ಬೇಟಿ ನೀಡಿ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಅಧಿಕಾರಿಗಳನ್ನು ಕರೆದು ಜನರಿಗೆ ತೊಂದರೆಯಾಗದಂತೆ ರೇಷನ್ ಕಾರ್ಡ್ ವಿತರಿಸಲು ಸೂಚನೆ ನೀಡಿದರು.

ಡಿ.31 ಕಾರ್ಡ್ ನೀಡಲು ಕೊನೆಯ ದಿನ ಎಂದು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹರಡುತ್ತಿದ್ದು,ಜನರು ಭಯದಿಂದ ಇಲಾಖೆಯ ಬಾಗಿಲಿಗೆ ಬಂದು ಕ್ಯೂ ನಿಲ್ಲುವಂತಾ್ಗಿದೆ. ರೇಷನ್ ಕಾರ್ಡ್ ಪಡೆಯಲು ಇನ್ನು ಕಾಲಾವಕಾಶ ನೀಡಲಾಗಿದ್ದು,ಜನರು ಯಾವುದೇ ಭಯಪಡೆಯಬೇಕಾಗಿಲ್ಲ, ಈ ಬಗ್ಗೆ ತಹಶಿಲ್ದಾರ್ ಅವರ ಅಧಿಕೃತವಾದ ಹೇಳಿಕೆಯನ್ನು ಮಾಧ್ಯಮ ಮೂಲಕ ನೀಡಲಿ ಎಂದು ಶಾಸಕರು ಸೂಚನೆ ನೀಡಿದರು.

ಪ್ರಮುಖರಾದ ವಿಕಾಸ್ ಪುತ್ತೂರು, ಶಾಂತವೀರ ಪೂಜಾರಿ , ಶಶಿಕಾಂತ್ ಶೆಟ್ಟಿ ಆರುಮುಡಿ ಸರಪಾಡಿ, ಅನೂಪ್ ಮಯ್ಯ, ಮೋಹನ್ ಪಿ.ಎಸ್.ಶಿವರಾಜ್ ಕಾಂದಿಲ, ಪ್ರಣಾಮ್ ಅಜ್ಜಿಬೆಟ್ಟು, ಆನಂದ ಶಂಭೂರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *