Breaking
19 Sep 2026, Sat

ಟ್ಯಾಂಕರ್‌ನ ಚಾಲಕ ರಕ್ತ ವಾಂತಿ ಮಾಡಿ ಅಸ್ವಸ್ಥ: ತಪ್ಪಿದ ಅನಾಹುತ

ಸುರತ್ಕಲ್: ಕುಳಾಯಿ ರೈಲ್ವೆ ಬ್ರಿಡ್ಜ್ ಬಳಿ ಎಲ್‌ಪಿಜಿ ಅನಿಲ ತುಂಬಿಸಿಕೊಳ್ಳಲು ಬರುತ್ತಿದ್ದ ಟ್ಯಾಂಕರ್‌ನ ಚಾಲಕರೊಬ್ಬರು ದಿಢೀರ್ ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿರುವ ಘಟನೆ ಜುಲೈ 13ರಂದು ನಡೆದಿದೆ.

ಎಚ್‌ಪಿಸಿಎಲ್‌ನಿಂದ ಅನಿಲ ತುಂಬಿಸಿಕೊಳ್ಳಲು ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಉಂಟಾಗಿ, ಅವರು ಅಸ್ವಸ್ಥಗೊಂಡು ರಕ್ತ ವಾಂತಿ ಮಾಡಿದ್ದಾರೆ. ತಕ್ಷಣ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಹ್ಯಾಂಡ್ ಬ್ರೇಕ್ ಬಳಸಿ ವಾಹನವನ್ನು ನಿಲ್ಲಿಸಿದ್ದಾರೆ. ಇದರಿಂದ ಭಾರೀ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಬಳಿಕ ಅಸ್ವಸ್ಥಗೊಂಡು ಪ್ರಜ್ಞಾಹೀನರಾಗಿದ್ದ ಚಾಲಕನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *