ಬಂಟ್ವಾಳ : ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ವತಿಯಿಂದ ಕಾಡು ಪ್ರಾಣಿಗಳ ಉಪಟಳ ತಡೆಗಟ್ಟುವುದಕ್ಕಾಗಿ ಜನ ಜಾಗೃತಿ ಸಭೆಯು ವಾಮದಪದವಿನ ಚೆನೈತ್ತೋಡಿ ಗ್ರಾಮದ ಗುರು ನಗರ ಭಜನಾ ಮಂದಿರದಲ್ಲಿ ನಡೆಯಿತು.

ವೇಣೂರು ಅರಣ್ಯಾಧಿಕಾರಿ ಸುನೀಲ್ ಕುಮಾರ್ ಕೆ.ಎಸ್ ಮಾತಾನಾಡಿ ಚಿರತೆಗಳ ಬಂಧನಕ್ಕೆ ಇಲಾಖೆಯಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ತುಳು ನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ವತಿಯಿಂದ ಅರಣ್ಯಾಧಿಕಾರಿ ಮತ್ತು ಪೋಲಿಸ್ ಅಧಿಕಾರಿಯವರಿಗೆ ಮನವಿ ನೀಡಲಾಯಿತು. ಶಾಲಾ ಮಕ್ಕಳು ಭಯಬೀತರಾಗಿ ಶಾಲೆಗೆ ಹೋಗುತ್ತಿದ್ದು ಸ್ಥಳೀಯ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಮಕ್ಕಳಿಗೆ ರಕ್ಷಣೆ ಬೇಕು ಎಂದು ಅಧಿಕಾರಿಯವರಲ್ಲಿ ಮನವಿ ಮಾಡಿಕೊಂಡರು.
ಸಂದರ್ಭದಲ್ಲಿ ಪುಂಜಾಲಕಟ್ಟೆ ಠಾಣೆಯ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಅಧ್ಯಕ್ಷ ಹರೀಶ್ ಪೂಜಾರಿ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಚೆನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ನಾಯ್ಕ್, ಚೆನೈತ್ತೋಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ತುಳುನಾಡ ರಕ್ಷಣಾ ವೇದಿಕೆ ಬಂಟ್ಟಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಮದಪದವು ಘಟಕದ ಕಾರ್ಯಾಧ್ಯಕ್ಷ ರಾದ ಸೌಕತ್ ಅಲಿ ಆಲದಪದವು ಕಾರ್ಯಕ್ರಮ ನಿರೂಪಿಸಿದರು.

