Breaking
7 May 2026, Thu

ಸಿದ್ದಕಟ್ಟೆಯಲ್ಲಿ ಅ.5 ರಂದು ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ರಕ್ತದಾನ ಶಿಬಿರ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ.) ಸಿದ್ಧಕಟ್ಟೆ ಬಂಟರ ಸಂಘ, ಸಿದ್ಧಕಟ್ಟೆ ವಲಯ ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇವರ ಜಂಟಿ ಆಶ್ರಯದಲ್ಲಿ A.J. Hospital & Research Centre A.J. Blood Bank , A.j. Institute of Medical Science , A.J. Institute of Dental Science, Kuntikana Mangalore ಇವರ ಸಹಯೋಗದೊಂದಿಗೆ ಡಾ. ಪುರುಷೋತ್ತಮ ಪೂಜಾರಿ ಹೃದ್ರೋಗ ತಜ್ಞರು, ಎ.ಜೆ. ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ರಕ್ತದಾನ ಶಿಬಿರವು ಅ. 05 ಆದಿತ್ಯವಾರದಂದು ಸಿದ್ಧಕಟ್ಟೆಯ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಲಿದೆ.

ಈ ಶಿಬಿರದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣರು ಕೃಷ್ಣಪ್ರಸಾದ್ ಆಚಾರ್ಯ ಹಾಗೂ ಶ್ರೀ ಕ್ಷೇತ್ರ ಪೂಂಜ ಪ್ರಧಾನ ಅರ್ಚಕರು ಪ್ರಕಾಶ್ ಆಚಾರ್ಯ ನೆರವರಿಸಲಿದ್ದಾರೆ. ಅಧ್ಯಕ್ಷತೆಯನ್ನು ರೊ| ಎನ್. ಪ್ರಕಾಶ್ ಕಾರಂತ್ (ಪಿ.ಡಿ.ಜಿ. ರೋಟರಿ ಜಿಲ್ಲೆ 3181) ವಹಿಸಲಿದ್ದಾರೆ.

ಗೌರವಾನ್ವಿತ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಕ್ಯಾ. ಬ್ರಿಜೇಶ್ ಚೌಟ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಕರ್ನಾಟಕ ಸರಕಾರದ ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *