Breaking
22 Mar 2026, Sun

ಗಂಟಲಿನಲ್ಲಿ ಆಮ್ಲೆಟ್‌ ಸಿಲುಕಿ ವ್ಯಕ್ತಿ ಸಾವು

ಕಾಸರಗೋಡು: ಆಮ್ಲೆಟ್ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೆ. 21 ರಂದು ಬದಿಯಡ್ಕದಲ್ಲಿ ನಡೆದಿದೆ.

ಬದಿಯಡ್ಕದ ಚುಲ್ಲಿಕ್ಕಾನದ ನಿವಾಸಿ ಮತ್ತು ಬರಡ್ಕದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಮೃತ ದುರ್ದೈವಿ. ವಿನ್ಸೆಂಟ್ ಬೇಲಾ ಕಟ್ಟತಂಗಡಿಯ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದರು.

ಸೆ.21 ರಂದು ಸಂಜೆ ಮನೆಯ ಸಮೀಪವಿರುವ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದ ವೇಳೆ ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡಿದ್ದು ತಕ್ಷಣವೇ ಅವರನ್ನು ಕುಂಬ್ಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *