Breaking
21 Jun 2026, Sun

ಉಳ್ಳಾಲ: ಪ್ರಾರ್ಥನೆ ಮಾಡಲು ಮಸೀದಿಗೆ ಹೋಗಿದ್ದ ವ್ಯಕ್ತಿ ನಾಪತ್ತೆ

ಉಳ್ಳಾಲ: ನಮಾಜು ಮಾಡಲು ಮಸೀದಿಗೆ ಹೋಗಿದ್ದ ವ್ಯಕ್ತಿಯೋರ್ವರು ಮನೆಗೆ ಮರಳಿ ಬಾರದೇ ನಾಪತ್ತೆಯಾಗಿದ್ದಾರೆ.

ಉಳ್ಳಾಲ ದೇರಳಕಟ್ಟೆ ಬೆಳ್ಮ ಗ್ರಾಮದ ನಿವಾಸಿ ಎಮ್‌ ಮಹಮ್ಮದ್‌ ಕಾಣೆಯಾದ ವ್ಯಕ್ತಿ.

ಎಮ್‌. ಮಹಮ್ಮದ್‌ ಅವರು ಬೆಳ್ಮ ಗ್ರಾಮದ ಬದಾರ ಎಂಬಲ್ಲಿಂದ ಸೆ.19ರ ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ದೇರಳಕಟ್ಟೆಯಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಗೆ ಪ್ರಾರ್ಥನೆಗೆ ಹೋಗಿದ್ದು ಬಳಿಕ ಮರಳಿ ಮನೆಗೆ ಬಂದಿಲ್ಲ .

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *