Breaking
24 Aug 2026, Mon

ಪರ್ಕಳ NH169A ಹೆದ್ದಾರಿಯಲ್ಲಿ ಕಂಟೇನರ್ ಲಾರಿ ಪಲ್ಟಿ, ಡೀಸೆಲ್ ಸೋರಿಕೆ

ಮಣಿಪಾಲ: ಪರ್ಕಳದ ಕೆಳಪರ್ಕಳದ NH169A ಹೆದ್ದಾರಿಯ ಕೆನರಾ ಬ್ಯಾಂಕ್ ತಿರುವಿನಲ್ಲಿ ಕಂಟೇನರ್ ಲಾರಿಯೊಂದು ಶನಿವಾರ ಬೆಳಗ್ಗೆ ಪಲ್ಟಿಯಾದ ಘಟನೆ ನಡೆದಿದೆ.

ಆತ್ರಾಡಿಯಿಂದ ಪೇಪರ್ ಬಾಕ್ಸ್ ಗಳನ್ನು ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ ಎಂದು ತಿಳಿದುಬಂದಿದೆ.

ಪರ್ಕಳದ ಈ ಭಾಗದಲ್ಲಿ ಬೃಹತ್ ವಾಹನಗಳು ಕೆಟ್ಟು ನಿಲ್ಲುವುದು ಹಾಗೂ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದ್ದು, ಸ್ಥಳೀಯರು ಹಲವು ಬಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಪಘಾತದ ಪರಿಣಾಮ ಲಾರಿಯಿಂದ ಡೀಸೆಲ್ ಸೋರಿಕೆಯಾಗಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಲಾರಿಯನ್ನು ಮೇಲಕ್ಕೆತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *