Breaking
22 Jun 2026, Mon

ದೇಶಸೇವೆಯಲ್ಲಿ 22 ವರ್ಷ ಸೇವೆ ಸಲ್ಲಿಸಿದ ನಿವೃತ್ತ ಯೋಧ ದೇವಪ್ರಸಾದ್ ಗೌಡರಿಗೆ ಅಭಿನಂದನೆ

ಮೊಗ್ರು: ದೇಶದ ಸೈನ್ಯದಲ್ಲಿ 22 ವರ್ಷಗಳ ಕಾಲ ಅನನ್ಯ ಸೇವೆ ಸಲ್ಲಿಸಿ ನಿವೃತ್ತರಾದ ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ಯೋಧ ಎ.ಸಿ.ಪಿ. ಹವಾಲ್ದಾರ್ ದೇವಪ್ರಸಾದ್ ಗೌಡ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಕಣಿಯೂರು ವಲಯದ ಮೊಗ್ರು ಒಕ್ಕೂಟದ ವತಿಯಿಂದ ಉಂತನಾಜೆ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರದ ಸಭಾಂಗಣದಲ್ಲಿ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮೊಗ್ರು ಒಕ್ಕೂಟದ ಅಧ್ಯಕ್ಷ ಗಂಗಾಧರ ಪೂಜಾರಿ, ಉಪಾಧ್ಯಕ್ಷ ಕೃಷ್ಣ ಬೆಳ್ಚಡ, ಕಾರ್ಯದರ್ಶಿ ನವೀನ್, ಕೋಶಾಧಿಕಾರಿ ಕಮಲ, ಕಣಿಯೂರು ವಲಯದ ಮೇಲ್ವಿಚಾರಕ ವಿಶ್ವನಾಥ್, ಸೇವಾ ಪ್ರತಿನಿಧಿ ಚಂದ್ರಕಲಾ, ಸಿಎಸ್‌ಸಿ ಸೇವಾದಾರೆ ಪೂರ್ಣಿಮಾ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *