Breaking
15 Jun 2026, Mon

ಶ್ರೀ ರುದ್ರ ಪಠಣ ಸಮಿತಿಯಿಂದ ಸಾಮೂಹಿಕ ಶ್ರೀ ರುದ್ರ ಪಾರಾಯಣ

ಮೂಡಬಿದ್ರೆ: ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಇದರ ವತಿಯಿಂದ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಮೂಡಬಿದ್ರೆ ಕ್ಷೇತ್ರದಲ್ಲಿ ಸಾಮೂಹಿಕವಾಗಿ ಶ್ರೀ ರುದ್ರ ನಮಕ-ಚಮಕ, ಗಣಪತಿ ಸೂಕ್ತ, ದೇವಿ ಸೂಕ್ತ, ಸೌರ ಸೂಕ್ತ, ಮನ್ಯು ಸೂಕ್ತ, ಆಘಮರ್ಷಣ ಸೂಕ್ತ ಹಾಗೂ ಮಂತ್ರಪುಷ್ಪ ಪಾರಾಯಣ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಅನಂತಕೃಷ್ಣ ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಕಾರ್ಯಕ್ರಮದ ಸಂಘಟಕ ಎ. ರವಿಶಂಕರ ಮೈಯ್ಯ, ಕೂಟ ಮಹಾಜಗತ್ತು ಮೂಡಬಿದ್ರೆ ಅಂಗಸಂಸ್ಥೆಯ ಅಧ್ಯಕ್ಷ ವಿದ್ವಾನ್ ಡಾ. ಸೋಮಶೇಖರ ಮಯ್ಯ, ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಎಂ. ಶ್ರೀನಿವಾಸ ಹೊಳ್ಳ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಮಯ್ಯ, ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಶಿವರಾಮ ಕಾರಂತ, ಕೃಷ್ಣಕುಮಾರ ಸೋಮಾಯಾಜಿ ಅರ್ಬಿ, ಎಂ. ಶಾಂತರಾಮ ರಾವ್, ಎನ್. ರಾಮಚಂದ್ರ ಮೈಯ್ಯ, ಎಂ. ಜಯರಾಮ ಮಯ್ಯ, ರವಿಶಂಕರ ಕಾರಂತ, ವಿಶಾಲ್ ಹೆಗ್ಗಡೆ, ಎ. ದನೇಶ್ವರ ರಾವ್ ಸೇರಿದಂತೆ ಅನೇಕ ಭಕ್ತರು ಹಾಗೂ ಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವೈದಿಕ ಪರಂಪರೆಯ ಸಂರಕ್ಷಣೆ ಹಾಗೂ ಧಾರ್ಮಿಕ ಮೌಲ್ಯಗಳ ಪ್ರಚಾರಕ್ಕೆ ಇಂತಹ ಸಾಮೂಹಿಕ ಪಾರಾಯಣ ಕಾರ್ಯಕ್ರಮಗಳು ಮಹತ್ವದ ಕೊಡುಗೆ ನೀಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

Leave a Reply

Your email address will not be published. Required fields are marked *